Saturday, 5 December 2020

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲೇ ಮಾಹಿತಿ


 ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲೇ ಮಾಹಿತಿ

ನವದೆಹಲಿ: ರೈಲು ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಕಾಯ್ದಿರಿಸಿದ ರೈಲಿನ ಮಾಹಿತಿಗಳನ್ನು ವಾಟ್ಸಾಪ್ ಮೂಲಕ ತಿಳಿಯಬಹುದಾಗಿದೆ.

98811 93322 ಸಂಖ್ಯೆಗೆ 10 ಅಂಕಿಗಳ ಪಿಎನ್‌ಆರ್ ನಂಬರ್ ವಾಟ್ಸಾಪ್ ಮಾಡುವ ಮೂಲಕ ಕಾಯ್ದಿರಿಸಿದ ರೈಲಿನ ವಿವರಗಳನ್ನು ತಿಳಿಯಬಹುದಾಗಿದೆ. ಕಾಯ್ದಿರಿಸಿದ ರೈಲು ಯಾವ ಊರಿನಲ್ಲಿದೆ ಎಂಬುದನ್ನು ತಿಳಿಯಲು ವಾಟ್ಸಾಪ್ ಮೂಲಕವೇ ತಿಳಿದುಕೊಳ್ಳಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗಿದೆ. ರೈಲೋಫಿ ಕಂಪನಿ ಪ್ರಯಾಣಿಕರ ಅನುಕೂಲಕ್ಕಾಗಿ ಇದನ್ನು ಪರಿಚಯಿಸಿದೆ.

ವೆಬ್ ಸೈಟ್, ಆಪ್ ಗಳ ಬದಲು 98811 93322 ಮೊಬೈಲ್ ಸಂಖ್ಯೆಯನ್ನು ಸೇವ್ ಮಾಡಿಕೊಂಡು 10 ಅಂಕಿಗಳ ಪಿಎನ್‌ಆರ್ ನಂಬರನ್ನು ಅದಕ್ಕೆ ಕಳುಹಿಸಿದರೆ ರೈಲು ಎಲ್ಲಿದೆ? ಪಿಎನ್‌ಆರ್ ಸ್ಥಿತಿಗತಿಗಳ ಕುರಿತ ಕ್ಷಣಕ್ಷಣದ ಮಾಹಿತಿಯನ್ನು ವಾಟ್ಸಾಪ್ ಮೂಲಕವೇ ತಿಳಿದುಕೊಳ್ಳಬಹುದು ಎಂದು ಹೇಳಲಾಗಿದೆ.



SHARE THIS

Author:

0 التعليقات: