Thursday, 10 December 2020

'ಗೋಹತ್ಯೆ ನಿಷೇಧ' ಬಗ್ಗೆ ಸೊಲ್ಲೆತ್ತದಿರಲು 'ಕಾಂಗ್ರೆಸ್ ಶಾಸಕಾಂಗ ಸಭೆ'ಯಲ್ಲಿ ತೀರ್ಮಾನ.?


 'ಗೋಹತ್ಯೆ ನಿಷೇಧ' ಬಗ್ಗೆ ಸೊಲ್ಲೆತ್ತದಿರಲು 'ಕಾಂಗ್ರೆಸ್ ಶಾಸಕಾಂಗ ಸಭೆ'ಯಲ್ಲಿ ತೀರ್ಮಾನ.?

ಬೆಂಗಳೂರು : ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ಅಂಗೀಕರಿಸಲ್ಪಟ್ಟಂತ ಗೋ ಹತ್ಯೆ ನಿಷೇಧದ ಬಗ್ಗೆ ಸೊಲ್ಲೆತ್ತದಿರಲು ಕಾಂಗ್ರೆತ್ ಇಂದು ನಡೆಯಂದ ಸಿಎಲ್ ಪಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

ಕಳೆದ ನಿನ್ನೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರ ವಿಧಾನಸಭೆಯಲ್ಲಿ ದಿಢೀರ್ ಗೋ ಹತ್ಯೆ ನಿಷೇಧ ಕಾಯ್ದೆ ಮಂಡಿಸಿ, ಅನುಮೋದಿಸಿತ್ತು. ಹೀಗಾಗಿ ಕಾಂಗ್ರೆಸ್ ಇಂದು ಸದನಕ್ಕೆ ಗೈರುಹಾಜರಾಗಿ, ಮುಂದಿನ ನಿರ್ಧಾರದ ಬಗ್ಗೆ ಶಾಸಕಾಂಗ ಸಭೆ ನಡೆಸಿ ತೀರ್ಮಾನ ನಡೆಸಿದರು. ಇಂತಹ ಸಭೆಯಲ್ಲಿ ಗೋ ಹತ್ಯೆ ನಿಷೇಧದ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ರೆ ಕಾಂಗ್ರೆಸ್ ಗೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಡ್ಯಾಮೇಜ್ ಆಗಬಹುದು ಎಂದು ನಾಯಕರು ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಗೋಹತ್ಯೆ ವಿರೋಧಿಸುವ ಸಂಬಂಧ ಮಾತನಾಡದಿರಲು ನಿರ್ಧಾರ ಮಾಡಿದೆಯಂತೆ. ಅಲ್ಲದೇ ಗ್ರಾ. ಪಂ ಚುನಾವಣೆ ವೇಳೆ ಕಾಂಗ್ರೆಸ್ ಗೆ ಆಗಬಹುದಾದಂತ ಡ್ಯಾಮೇಜ್ ತಪ್ಪಿಸಲು, ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಿಂದ ತೊಂದರೆ ಆಗದಿರಲು, ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಜೊತೆಗೆ ಬಿಜೆಪಿಯವರ ಹಿಡನ್ ಅಜೆಂಡಾ ಕೂಡ ಇದೇ ಆಗಿದೆ ಎಂದು ಅರಿತಿರುವ ಕಾಂಗ್ರೆಸ್, ಗೋಹತ್ಯೆಯನ್ನ ಕಟುವಾಗಿ ವಿರೋಧಿಸುವುದು ಬೇಡ ಅಂತ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.


SHARE THIS

Author:

0 التعليقات: