Thursday, 17 December 2020

ದೆಹಲಿಯಲ್ಲಿ ಶುಕ್ರವಾರವೂ ವಿಪರೀತ ಚಳಿ ಮುಂದುರಿಯುವ ಸಾಧ್ಯತೆ


 ದೆಹಲಿಯಲ್ಲಿ ಶುಕ್ರವಾರವೂ ವಿಪರೀತ ಚಳಿ ಮುಂದುರಿಯುವ ಸಾಧ್ಯತೆ

ನವದೆಹಲಿ: ಪಶ್ಚಿಮ ಹಿಮಾಲಯದಿಂದ ಶೀತ ಗಾಳಿ ಬೀಸುತ್ತಿರುವ ಪರಿಣಾಮ ಶುಕ್ರವಾರವೂ ದೆಹಲಿಯಲ್ಲಿ ವಿಪರೀತ ಚಳಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ಇಲ್ಲಿ ಶುಕ್ರವಾರ ಕನಿಷ್ಠ ತಾಪಮಾನವು 4.4 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗಿದೆ ಎಂದು ಸಫ್ದರ್ಜಂಗ್ ವೀಕ್ಷಣಾಲಯ ತಿಳಿಸಿದೆ. ಪಾಲಂ ಹವಾಮಾನ ಕೇಂದ್ರದಲ್ಲಿ ಕನಿಷ್ಠ ತಾಪಮಾನ 3.4 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ದೆಹಲಿಯಲ್ಲಿ ಗುರುವಾರ ಗರಿಷ್ಠ ತಾಪಮಾನ 15.2 ಡಿಗ್ರಿ ಸೆಲ್ಸಿಯಸ್‌ ಇತ್ತು ಎಂದು ಐಎಂಡಿ ತಿಳಿಸಿದೆ.

ದೆಹಲಿಯಲ್ಲಿ ಶನಿವಾರ 'ಶೀತ ಅಲೆ' ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಮನ್ಸೂಚನೆ ನೀಡಲಾಗಿದ್ದು, ಸೋಮವಾರದ ತನಕ ಚಳಿ ಹೀಗೆ ಮುಂದುವರಿಯಲಿದೆ ಎಂದು ಇಲಾಖೆ ಹೇಳಿದೆ.SHARE THIS

Author:

0 التعليقات: