ರಾಜ್ಯಾದ್ಯಂತ ನೈಟ್ ಕರ್ಫ್ಯೂ: ಪ್ರಯಾಣಿಕರೇ ಎಚ್ಚರ ಬಸ್ ಇರಲ್ಲ
ಬೆಂಗಳೂರು: ಪ್ರಯಾಣಿಕರೇ ಎಚ್ಚರ, ರಾತ್ರಿ 10 ಗಂಟೆಯೊಳಗೆ ಮನೆ ಸೇರಿಕೊಳ್ಳೋಕೆ ರೆಡಿಯಾಗಿದೆ. ಹೊಸ ರೂಪಾಂತರ ಕರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಇಂದಿನಿಂದ(ಡಿ.23) ಜ.2ರ ವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಯೂ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಬಂದ್ ಆಗಲಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರವೂ ರಾತ್ರಿ 10ರ ಬಳಿಕ ಸ್ಥಗಿತಗೊಳ್ಳಲಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ನೈಟ್ ಕರ್ಫ್ಯೂ ಹಿನ್ನೆಲೆ ರಾತ್ರಿ ವೇಳೆ ಬಿಎಂಟಿಸಿ ಬಸ್ ಬಂದ್ ಆಗಲಿವೆ. ಆದರೆ ರಾತ್ರಿ ವೇಳೆ ಸಂಚರಿಸುವ ಇತರ ಬಸ್ಗಳು ರಾತ್ರಿ 10ರೊಳಗೆ ಬೆಂಗಳೂರು ಬಿಡಬೇಕು. ಬೆಳಗ್ಗೆ 6 ಗಂಟೆಯೊಳಗೆ ನಿಗದಿತ ಸ್ಥಳ ತಲುಪುವಂತಿರಬೇಕು. ಸ್ವಲ್ಪ ಹೊತ್ತಿನಲ್ಲೇ ಮಾರ್ಗಸೂಚಿ ಕೈ ಸೇರಲಿದೆ. ಆ ನಂತರ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಒಟ್ಟಿನಲ್ಲಿ ನ್ಯೂ ಇಯರ್ ಮತ್ತು ಕ್ರಿಸ್ಮಸ್ ಆಚರಣೆಯ ಸಂಭ್ರಮದಲ್ಲಿದ್ದ ಬಹುತೇಕರಿಗೆ 'ಬ್ರಿಟನ್' ಕರೊನಾ ನಿರಾಶೆ ಜತೆಗೆ ಆತಂಕವನ್ನೂ ಮೂಡಿಸಿದೆ. ಸಂಜೆ ವೇಳೆಗೆ ನೈಟ್ ಕರ್ಫ್ಯೂ ಬಗ್ಗೆ ಸ್ಪಷ್ಟತೆ ಸಿಗಲಿದೆ.
0 التعليقات: