ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ : ಅಕ್ಕನ ವಿರುದ್ಧ ಗೆದ್ದ ತಂಗಿ, ಒಂದು ಮತದ ಅಂತರದಿಂದ ಗೆದ್ದ ಅಭ್ಯರ್ಥಿಗಳು!
ಬೆಂಗಳೂರು : ರಾಜ್ಯದ ಗ್ರಾಮಪಂಚಾಯಿತಿ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಈಗಾಗಲೇ ಮತ ಎಣಿಕೆ ಶುರುವಾಗಿದ್ದು, ಹಲವು ಗ್ರಾ.ಪಂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕೇವಲ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ.
ರಾಜ್ಯದ 5,728 ಗ್ರಾಮಪಂಚಾಯಿತಿಗಳಿ 82,616 ಸ್ಥಾನಗಳ ಫಲಿತಾಂಶ ಪ್ರಕಟವಾಗಲಿದ್ದು, ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಿದೆ.
ಕೊಡಗು ಜಿಲ್ಲೆ ಮಡಿಕೇರಿಯ ಮೇಕೇರಿ ಗ್ರಾ.ಪಂಯಲ್ಲಿ ಅಕ್ಕನ ವಿರುದ್ಧ ತಂಗಿಗೆ ಗೆಲುವು ಸಾಧಿಸಿದ್ದು, ಮೇಕೆರಿ ಗ್ರಾಮಪಂಚಾಯಿತಿಯ ಬಿಳಿಗೇರಿ ವಾರ್ಡ್ ನಂ.01 ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಪುಷ್ಪಾ ಜಯಗಳಿಸಿದ್ದಾರೆ.ಹಿರಿಯ ಸಹೋದರಿ ಸುಮಾವತಿ 80 ಮತಗಳನ್ನು ಪಡೆದರೆ, ಪುಷ್ಪಾ 283 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ತುಮಕೂರು ತಾಲ್ಲೂಕಿನ ಬುಗಡನಹಳ್ಳಿ ಗ್ರಾಮ ಪಂಚಾಯ್ತಿಯ ಹನುಮಂತಪುರ ಕ್ಷೇತ್ರದ ಅಭ್ಯರ್ಥಿ ಟಿ.ವಿ. ಶಿವಕುಮಾರ್ ಕೇವಲ ಒಂದು ಮತದ ಅಂತರದಿಂದ ಸಮೀಪ ಪ್ರತಿ ಸ್ಪರ್ಧಿ ಕೃಷ್ಣಪ್ಪ ಅವರನ್ನು ಸೋಲಿಸಿದ್ದಾರೆ. ಅಭ್ಯರ್ಥಿ ಟಿ.ವಿ..ಶಿವಕುಮಾರ್ ಅವರಿಗೆ 163 ಮತಗಳು ಬಂದಿದ್ದರೆ ಪ್ರತಿಸ್ಪರ್ಧಿ ಕೃಷ್ಣಪ್ಪಗೆ 162 ಮತ ಪಡೆದಿದ್ದಾರೆ. ಈ ಮೂಲಕ ಒಂದು ಮತದ ಅಂತರದಿಂದ ಶಿವಕುಮಾರ್ ಜಯಗಳಿಸಿದ್ದಾರೆ.
ಇನ್ನು ಗಂಗಾವತಿ ತಾಲೂಕಿನ ಸಣ್ಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಜನಹಳ್ಳಿ ಗ್ರಾಮದ ರಾಣಿ ನಾಗೇಂದ್ರ ಎನ್ನುವವರು ಕೇವಲ ಒಂದು ಮತದಿಂದ ರೋಚಕ ಗೆಲುವು ದಾಖಲಿಸಿದ್ದಾರೆ.
0 التعليقات: