Wednesday, 30 December 2020

ಮಗನ ಕೈಯಲ್ಲೇ ಕೊಲೆಯಾದ ನಿವೃತ್ತ ಆರ್ ಬಿಐ ಮ್ಯಾನೇಜರ್!


ಮಗನ ಕೈಯಲ್ಲೇ ಕೊಲೆಯಾದ ನಿವೃತ್ತ ಆರ್ ಬಿಐ ಮ್ಯಾನೇಜರ್!

ಅನೈತಿಕ ಸಂಬಂಧ ಹಾಗೂ ಆಸ್ತಿ ವಿಚಾರವಾಗಿ ಶುರುವಾದ ಜಗಳ ನಿವೃತ್ತ ಆರ್ ಬಿಐ ಮ್ಯಾನೇಜರ್ ಮಗನ ಕೈಯಲ್ಲೇ ಕೊಲೆಯಾಗುವ ಮೂಲಕ ಅಂತ್ಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿವೃತ್ತ ವ್ಯವಸ್ಥಾಪಕ ಅಮರನಾಥ್ ಪುತ್ರ ಮನೋಕ್ ನಿಂದಲೇ ಹತ್ಯೆಗೈಗೊಳಗಾಗಿದ್ದಾರೆ. ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅಮರನಾಥ್ ಪತ್ನಿಗೆ ವಿಚ್ಚೇದನ ನೀಡಿ ಮತ್ತೊಬ್ಬ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಚಾರವಾಗಿ ತಂದೆ ಮಗನ ನಡುವೆ ಗಲಾಟೆ ನಡೆದಿದ್ದು, ಮಗ ಚಾಕವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿದ್ದ ಅಮರನಾಥ್, ಭಾರತಿ ನಗರದಲ್ಲಿ ಮನೆ ನಿರ್ಮಿಸುತ್ತಿದ್ದರು. ಆಸ್ತಿ ವಿಚಾರವಾಗಿ ತಂದೆ ಮಗನ ನಡುವೆ ನಿನ್ನೆ ರಾತ್ರಿ ಗಲಾಟೆಯಾಗಿದೆ. ಕೆಲಸವಿಲ್ಲದೆ ಮನೆಯಲ್ಲಿದ್ದ ಮನೋಕ್ ಮಾದಕ ವ್ಯಸನಿಯಾಗಿದ್ದ. ಅನೈತಿಕ ಸಂಬಂಧ ಮತ್ತು ಆಸ್ತಿ ವಿಚಾರವಾಗಿ ಗಲಾಟೆಯಾದಾಗ ಮನೋಕ್ ಕೋಪದಿಂದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮನೋಕ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.SHARE THIS

Author:

0 التعليقات: