Thursday, 24 December 2020

ಎಸ್ ವೈ ಎಸ್ ಕಾರ್ಯಕರ್ತನ ಕೊಲೆ: ಝೋನ್ ಗಳಲ್ಲಿ ಇಂದು ಪ್ರತಿಭಟನೆ


 ಎಸ್ ವೈ ಎಸ್ ಕಾರ್ಯಕರ್ತನ ಕೊಲೆ: ಝೋನ್ ಗಳಲ್ಲಿ ಇಂದು  ಪ್ರತಿಭಟನೆ 

ಕೋಝಿಕ್ಕೋಡ್ : ಕಾಞಂಗಾಡ್ ಪಝಯ ಕಡಪ್ಪುರಂ ಸ್ವದೇಶಿ ಮತ್ತು ಎಸ್ ವೈ ಎಸ್ ಕಾರ್ಯಕರ್ತನೂ ಆಗಿದ್ದ ಅಬ್ದುರ್ರಹ್ಮಾನ್ ಔಫ್ ನನ್ನು ಮುಸ್ಲಿಂ ಲೀಗ್  ಕಾರ್ಯಕರ್ತರು ಕೊಲೆ ಮಾಡಿದ್ದನ್ನು ಪ್ರತಿಭಟಿಸುತ್ತಾ ಕೇರಳ ರಾಜ್ಯಾದ್ಯಂತ  ವ್ಯಾಪಕವಾದ ಪ್ರತಿಭಟನಾ ರ್ಯಾಲಿ ನಡೆಯಲಿದೆ. 

ಸಮಕಾಲೀನ ರಾಜಕೀಯ ಸೋಲನ್ನು ಮುಚ್ಚಲು ಮುಸ್ಲಿಂ ಲೀಗ್ ಮಾಡುತ್ತಿರುವ ಇಂತಹ ಕೊಲೆಗಳ ವಿರುದ್ಧ ಕಾನೂನು ಹೋರಟ ಮಾಡುವೆವು ಎಂದು ಎಚ್ಚರ ನೀಡುತ್ತಾ ಪ್ರತಿಭಟನೆ ಎಂದು ತಿಳಿದು ಬಂದಿದೆ. 

ಕೇರಳದಲ್ಲಿ ಇಂದು ಸಂಜೆ 4 ಗಂಟೆಯಿಂದ ನಡೆಯುವ ಪ್ರತಿಭಟನಾ ಮಾರ್ಚಲ್ಲಿ ಎಲ್ಲಾ ಕಾರ್ಯಕರ್ತರು ಭಾಗವಹಿಸಬೇಕೆಂದು ವಿವಿಧ ಸುನ್ನಿ ಸಂಘಟನೆಗಳು ತಿಳಿಸಿದೆ.


SHARE THIS

Author:

0 التعليقات: