Wednesday, 23 December 2020

ರಾಜ್ಯದಲ್ಲಿ ಮತ್ತೆ 'ನೈಟ್ ಕರ್ಫೂ' ಸಮಯ ಬದಲು.! 'ಕಾಟಚಾರ'ದ 'ನೈಟ್ ಕರ್ಫೂ'ಗೆ, ರಾಜ್ಯ ಸರ್ಕಾರದ ವಿರುದ್ದ 'ಜನಪ್ರತಿನಿಧಿ'ಗಳು,'ಸಾರ್ವಜನಿಕರ ಆಕ್ರೋಶ'


 ರಾಜ್ಯದಲ್ಲಿ ಮತ್ತೆ 'ನೈಟ್ ಕರ್ಫೂ' ಸಮಯ ಬದಲು.! 'ಕಾಟಚಾರ'ದ 'ನೈಟ್ ಕರ್ಫೂ'ಗೆ, ರಾಜ್ಯ ಸರ್ಕಾರದ ವಿರುದ್ದ 'ಜನಪ್ರತಿನಿಧಿ'ಗಳು,'ಸಾರ್ವಜನಿಕರ ಆಕ್ರೋಶ'

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿರಲಿದೆ. ಆದ್ರೇ ಈ ಹಿಂದಿನ ನೈಟ್ ಕರ್ಪ್ಯೂಗೂ, ಇದೀಗ ರಾಜ್ಯ ಸರ್ಕಾರ ಜಾರಿಗೊಳಿಸಿರುವಂತ ನೈಟ್ ಕರ್ಪ್ಯೂಗೂ ಅಜಗಜಾಂತರ ವ್ಯತ್ಯಾಸವಿದೆ. ಸಾರ್ವಜನಿಕರ ಓಡಾಡಕ್ಕೆ ಮಾತ್ರವೇ ನೈಟ್ ಕರ್ಪ್ಯೂ ನಲ್ಲಿ ಬ್ರೇಕ್ ಹಾಕಿದ್ರೇ, ಮಿಕ್ಕೆಲ್ಲಾ ಸೇವೆಗಳಿಗೆ ಯಥಾಸ್ಥಿತಿಯನ್ನು ನೀಡಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕಾಟಾಚಾರಕ್ಕೆ ನೈಟ್ ಕರ್ಪ್ಯೂ ಜಾರಿಗೊಳಿಸಿದೆ ಎಂಬುದಾಗಿ ಜನಪ್ರತಿನಿಧಿಗಳು, ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಕರೋನ ವೈರಸ್‌ನ ಎರಡನೇ ತಳಿ ಪತ್ತೆಯಾಗಿರೋದು, ಇಡೀ ವಿಶ್ವವನ್ನು ಆತಂಕಕ್ಕೆ ಈಡುಮಾಡಲಾಗಿದೆ. ಇವೆಲ್ಲದರ ನಡುವೆ ಭಾರತ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಈ ಬಗ್ಗೆ ಕಟ್ಟೇಚ್ಚರವಹಿಸಲಾಗಿದೆ.. ಈ ನಡುವೆ ಕರ್ನಾಟಕದಲ್ಲಿಯೂ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದ್ದು, ಇಂದಿನಿಂದ ಜನವರಿ 2, 2021ರವರೆಗೆ ರಾತ್ರಿ 11 ಗಂಟಿಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಗೊಳಿಸಲಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರ ಮಾರ್ಗಸೂಚಿ ಕ್ರಮಗಳನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ನೈಟ್ ಕರ್ಪ್ಯೂ ವೇಳೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಅಷಅಟೇ ನಿರ್ಬಂಧ ವಿಧಿಸಲಾಗಿದೆ. ಮಾರ್ಗಸೂಚಿಯಂತೆ ನೈಟ್ ಕರ್ಪ್ಯೂ ವೇಳೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾತ್ರಿ ಪಾಳಯಾದ ಕೆಲಸಗಾರರನ್ನು ಹೊರತು ಪಡಿಸಿ ಜನತೆ ಓಡಾಟ ಇರೋದಿಲ್ಲ. ಇದೇ ಸಮಯದಲ್ಲಿ ಕರೋನ ವೈರಸ್‌ ಹರಡುತ್ತದೆ ಅಂತ ಹೇಳಿದವರು ಯಾರು? ಈ ಹಿಂದಿನ ನೈಟ್‌ ಕರ್ಫೂ ವಿಫಲವಾಗಿರೋದು ರಾಜ್ಯ ಸರ್ಕಾರಕ್ಕೆ ಗೊತ್ತಿಲ್ವಾ? ಎಂಬುದಾಗಿ ವಿರೋಧರ ಪಕ್ಷದ ನಾಯಕರು, ಸಾರ್ವಜನಿಕರು ರಾಜ್ಯ ಸರ್ಕಾರ ವಿರುದ್ಧ ಕಿಡಿ ಕಾರಿದ್ದಾರೆ.

ರಾಜ್ಯ ಸರ್ಕಾರ ಕಾಟಾಚಾರದ ಈ ರೀತಿಯ ನೈಟ್ ಕರ್ಪ್ಯೂ ಜಾರಿಗೊಳಿಸುವ ಬದಲು, ರಾತ್ರಿ ಕರ್ಪ್ಯೂ ವೇಳೆಯಲ್ಲಿ ಈ ಹಿಂದಿನಂತೆ ನೈಟ್ ಕರ್ಪ್ಯೂ ಮಾರ್ಗಸೂಚಿ ಕ್ರಮಗಳನ್ನು ಜಾರಿಗೊಳಿಸಬೇಕು. ವಿದೇಶದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಕಡ್ಡಾಯಗೊಳಿಸಬೇಕು. ಕೊರೋನಾ ಪಾಸಿಟಿವ್ ವರದಿ ಬಳಿಕ, ವಿದೇಶಿ ಪ್ರವಾಸಿಗರಿಗೆ ಕ್ವಾರಂಟೈನ್ ನಿಯಮ ಕಡ್ಡಾಯಗೊಳಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ. ಅಲ್ಲದೇ ಕೋವಿಡ್ ಹೊಸ ರೂಪಾಂತರದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವಂತ ಕೆಲಸ ರಾಜ್ಯ ಸರ್ಕಾರ ಮಾಡಲಿ ಎಂಬುದಾಗಿಯೂ ಮನವಿ ಮಾಡಿದ್ದಾರೆ. ಇದೀಗ ರಾಜ್ಯ ಸರ್ಕಾರ ಸಾರ್ವಜನಿಕರ ಆಕ್ರೋಶದಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದು, ನೈಟ್ ಕರ್ಪ್ಯೂ ನಿಯಮಗಳಲ್ಲಿ ಬದಲಾವಣೆ ಮಾಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.


SHARE THIS

Author:

0 التعليقات: