Thursday, 17 December 2020

ತನ್ನ ಪಕ್ಷದವರ ಮೇಲೆಯೇ ಕಿಡಿಕಾರಿದ ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ


ತನ್ನ ಪಕ್ಷದವರ ಮೇಲೆಯೇ ಕಿಡಿಕಾರಿದ ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ

ಬೆಂಗಳೂರು: ಮುಸ್ಲಿಮರಿಗೆ ಒಂದು ಬಾರಿಯಾದರೂ ಕೆಪಿಸಿಸಿ ಅಧ್ಯಕ್ಷತೆಯನ್ನು ನೀಡಿದ್ದೀರೇ? ಹೀಗಿರುವಾಗ ಇನ್ನು ಎಷ್ಟು ವರ್ಷ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಮತ ಹಾಕಬೇಕು ಎಂದು ವಿಧಾನ ಪರಿಷತ್‌ ಸದಸ್ಯ, ಕಾಂಗ್ರೆಸ್‌ ಮುಖಂಡ ಸಿ.ಎಂ. ಇಬ್ರಾಹಿಂ ಅವರು ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದು.

ಸ್ವತಂತ್ರ ಬಂದ ದಿನದಿಂದಲೂ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಸಾತ್ ನೀಡುತ್ತ ಬಂದಿದೆ. ಮುಸ್ಲಿಮರು ಇವರಿಗೆ ಮತ ಹಾಕಲು ಮಾತ್ರ ಬೇಕು. ಮಿಕ್ಕಿದ ಎಲ್ಲಾ ಸಮಯದಲ್ಲಿ ಇವರ ಕಣ್ಣಿಗೆ ಮುಸ್ಲಿಮರು ಕಾಣುವುದೇ ಇಲ್ಲ. ಇದುವರೆಗೂ ಒಬ್ಬನೇ ಒಬ್ಬ ಮುಸ್ಲಿಮನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿಲ್ಲ. ಶೇ.16ರಷ್ಟುಇರುವ ಮುಸ್ಲಿಮರು ನಿಮಗೆ ಮತ ಹಾಕಲು ಮಾತ್ರ ಬೇಕಾ ಎಂದು ಇಬ್ರಾಹಿಂ ಕಾಂಗ್ರೆಸ್‌ ನಾಯಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ನಡೆಯ ಬಗ್ಗೆ ಯಾವುದೇ ಅನುಮಾನ ಬೇಡ. ಪಕ್ಷದಲ್ಲಿ ಮುಸ್ಲಿಂ ನಾಯಕತ್ವದ ಸಂಘರ್ಷ ನನ್ನ ನಡೆಗೆ ಕಾರಣ ಎನ್ನುವುದು ಸಹ ಸರಿಯಲ್ಲ. ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ರಾಜ್ಯಾದ್ಯಂತ ಪ್ರವಾಸ ಮಾಡಿದ ಬಳಿಕ ಘೋಷಿಸುವುದಾಗಿ ಹೇಳಿದರು.



SHARE THIS

Author:

0 التعليقات: