Friday, 18 December 2020

ಶಾಲೆ ಆರಂಭವಾದ್ರೂ ಮಕ್ಕಳಿಗೆ 'ಬಿಸಿಯೂಟ' ಇಲ್ಲ..! ಮನೆಯಿಂದಲೇ ಊಟ ತರಬೇಕು..!!


ಶಾಲೆ ಆರಂಭವಾದ್ರೂ ಮಕ್ಕಳಿಗೆ 'ಬಿಸಿಯೂಟ' ಇಲ್ಲ..! ಮನೆಯಿಂದಲೇ ಊಟ ತರಬೇಕು..!!


ಬೆಂಗಳೂರು: ಈ ವರ್ಷ ಶಾಲಾ ಮಕ್ಕಳಿಗೆ ಬಿಸಿಯೂಟ ಇರುವುದಿಲ್ಲ. ನೇರವಾಗಿಯೇ ಆಹಾರಧಾನ್ಯ ಪೂರೈಕೆ ಮಾಡಲಾಗುತ್ತದೆ.ಒಂದರಿಂದ ಐದನೇ ತರಗತಿಯ ಮಕ್ಕಳಿಗೆ ದಿನಕ್ಕೆ 100 ಗ್ರಾಂ ಅಕ್ಕಿ ಅಥವಾ ಗೋಧಿ ಹಾಗೂ 58 ಗ್ರಾಂ ತೊಗರಿಬೇಳೆ ನೀಡಲಾಗುವುದು. 6 ರಿಂದ 10 ನೇ ತರಗತಿಯ ಮಕ್ಕಳಿಗೆ ದಿನಕ್ಕೆ 150 ಗ್ರಾಂ ಅಕ್ಕಿ ಅಥವಾ ಗೋಧಿ, 87 ಗ್ರಾಂ ಬೇಳೆ ವಿತರಿಸಲಾಗುತ್ತದೆ.

ಕೊರೋನಾ ಕಾರಣದಿಂದಾಗಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳಿಗೆ ಬಿಸಿಯೂಟ ನೀಡದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಾಗಿ ನ್ಯಾಯಾಲಯಕ್ಕೆ ಕೂಡ ಮಾಹಿತಿ ನೀಡಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕೊರೋನಾ ಕಾರಣದಿಂದ ಬಿಸಿಯೂಟದ ಬದಲು ಆಹಾರಧಾನ್ಯವನ್ನು ನೀಡಲು ಮುಂದಾಗಿದೆ.

ಜನವರಿ 1 ರಿಂದ ಎಸ್‌ಎಸ್‌ಎಲ್ಸಿ ಮತ್ತು 12ನೇ ತರಗತಿ ಆರಂಭವಾಗುವ ಸಾಧ್ಯತೆಯಿದೆ. ವಿದ್ಯಾಗಮ ಯೋಜನೆಯಡಿ 1ರಿಂದ 9ನೇ ತರಗತಿಗಳು ಶಾಲೆಯ ಆವರಣದಲ್ಲಿ ನಡೆದರೂ ಬಿಸಿಯೂಟ ನೀಡುವುದಿಲ್ಲ. ಮಕ್ಕಳು ಮನೆಯಿಂದಲೇ ಊಟ ತರಬೇಕಿದೆ. ಬಿಸಿಯೂಟ ಬದಲಿಗೆ ಆಹಾರಧಾನ್ಯ ನೀಡಲಾಗುವುದು ಎಂದು 


SHARE THIS

Author:

0 التعليقات: