Thursday, 10 December 2020

ತಾತನಾದ ಸಂಭ್ರಮದಲ್ಲಿ ಉದ್ಯಮಿ ಮುಕೇಶ್ ಅಂಬಾನಿ

 ತಾತನಾದ ಸಂಭ್ರಮದಲ್ಲಿ ಉದ್ಯಮಿ ಮುಕೇಶ್ ಅಂಬಾನಿ


ಮುಂಬೈ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಾಯನ್ಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ತಾತನಾದ ಸಂಭ್ರಮದಲ್ಲಿದ್ದಾರೆ.


ಮುಕೇಶ್ ಅಂಬಾನಿ-ನೀತಾ ಅಂಬಾನಿಯವರ ಮಗ ಆಕಾಶ್ ಅಂಬಾನಿ ಅವರ ಪತ್ನಿ ಶ್ಲೋಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕುರಿತು ಮುಕೇಶ್ ದಂಪತಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.


ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಮಗು ಜನನವಾಗಿದೆ ಎಂದು ತಿಳಿಸಿದ್ದಾರೆ.


2019ರ ಮಾರ್ಚ್ ತಿಂಗಳಲ್ಲಿ ಆಕಾಶ್-ಶ್ಲೋಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.



SHARE THIS

Author:

0 التعليقات: