'ಕೃಷಿ ಕಾಯಿದೆ' ಹಿಂಪಡೆಯದಿದ್ದರೆ 'ಖೇಲ್ ರತ್ನ' ಪ್ರಶಸ್ತಿ ವಾಪಸ್ : ಬಾಕ್ಸರ್ 'ವಿಜೇಂದರ್ ಸಿಂಗ್' ಎಚ್ಚರಿಕೆ
ನವದೆಹಲಿ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈತರ ಮನವೊಲಿಸಲು ಕೇಂದ್ರ ಸರ್ಕಾರ ನಡೆಸಿದ ಹಲವು ಸಂಧಾನ ಸಭೆಗಳು ಕೂಡ ವಿಫಲವಾಗಿದ್ದು, ಅಲ್ಲದೇ ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ಕೂಡ ಕರೆ ನೀಡಲಾಗಿದೆ.
ಈ ನಡುವೆ ರೈತರ ಹೋರಾಟಕ್ಕೆ ನಟ ನಟಿಯರು ಕ್ರೀಡಾಪಟುಗಳು ಕೂಡ ಸಾಥ್ ನೀಡುತ್ತಿದ್ದು. ಇದೀಗ ಹರಿಯಾಣ ದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆಗೆ ಬಾಕ್ಸರ್ ವಿಜೇಂದರ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ,
ಈ ಬಗ್ಗೆ ಮಾತನಾಡಿದ ಅವರು 'ಕೇಂದ್ರ ಸರ್ಕಾರ ಕರಾಳ ಕೃಷಿ ಕಾಯಿದೆಗಳನ್ನು ವಾಪಸ್ ಪಡೆಯದಿದ್ದರೆ ನಾನು ನನ್ನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಾಪಸ್ ನೀಡುತ್ತೇನೆ ಎಂದು ಎಚ್ಚರಿಕೆ ನಿಡಿದ್ದಾರೆ. ವಿಜೇಂದರ್ ಸಿಂಗ್ ಗೆ 2009 ಜುಲೈನಲ್ಲಿ ಖೇಲ್ ರತ್ನ ಪ್ರಶಸ್ತಿ ನೀಡಲಾಗಿತ್ತು.
0 التعليقات: