Thursday, 17 December 2020

ಅರೇಬಿಕ್: ವೈವಿಧ್ಯತೆಯ ಆಗರ


 ಅರೇಬಿಕ್: ವೈವಿಧ್ಯತೆಯ ಆಗರ

   ಅರೇಬಿಕ್ ಭಾಷೆ ಮಾನವೀಯ  ವೈವಿಧ್ಯತೆಯ ಸಾಂಸ್ಕೃತಿಕ ಆಧಾರ ಸ್ತಂಭವಾಗಿದೆ. ಅರಬೀ ಭಾಷೆಯು ವಿಶ್ವದಲ್ಲಿ ಹೆಚ್ಚು ವ್ಯಾಪಕವಾಗಿ ಮಾತನಾಡುವ ಭಾಷೆಗಳಲ್ಲಿ ಒಂದಾಗಿದೆ, ಈ ಭಾಷೆಯನ್ನು ಪ್ರತಿದಿನ 290 ದಶಲಕ್ಷಕ್ಕೂ ಹೆಚ್ಚು ಜನರು ಬಳಸುತ್ತಾರೆ. ವಿಶ್ವ ಅರೇಬಿಕ್ ಭಾಷಾ ದಿನವನ್ನು 2012 ರಿಂದ ಪ್ರತಿ ವರ್ಷ ಡಿಸೆಂಬರ್ 18 ರಂದು ಆಚರಿಸಲಾಗುತ್ತದೆ. 1973 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅರೇಬಿಕನ್ನು ಸಂಘಟನೆಯ ಆರನೇ ಅಧಿಕೃತ ಭಾಷೆಯಾಗಿ ಸ್ವೀಕರಿಸಿತು.

   ಅರೇಬಿಕ್ ಭಾಷೆಯ ಪ್ರಕಾರಗಳು ವೈವಿಧ್ಯತೆಯಲ್ಲಿ ಕಾವ್ಯಾತ್ಮಕದಿಂದ  ಕ್ಯಾಲಿಗ್ರಫಿಯವರೆಗೆ, ವಾಸ್ತುಶಿಲ್ಪ, ಕವನ, ತತ್ವಶಾಸ್ತ್ರ ಮತ್ತು ಹಾಡಿನಂತಹ ವೈವಿಧ್ಯಮಯ ಕ್ಷೇತ್ರಗಳಲ್ಲಿ ಆಕರ್ಷಕ ಸೌಂದರ್ಯಕ್ಕೆ ಸಾಕ್ಷಿಯಾಗಿದೆ. ಇದರ ಇತಿಹಾಸವು ಇತರ ಭಾಷೆಗಳೊಂದಿಗಿನ ಸಂಪರ್ಕಗಳಿಂದ  ಶ್ರೀಮಂತಿಕೆಯನ್ನು ತಿಳಿಸುತ್ತದೆ.  ಅರೇಬಿಕ್ ಭಾಷೆಯು ಜ್ಞಾನದಲ್ಲಿ ಮತ್ತಿತರ ಭಾಷೆಗಳಿಗಿಂತ ವ್ಯತ್ಯಸ್ಥ ವಾಗಿದೆ, ಗ್ರೀಕ್ ಮತ್ತು ರೋಮನ್ ತತ್ತ್ವಚಿಂತನೆಗಳನ್ನು ನವೋದಯ ಯುರೋಪಿಗೆ ಪ್ರಸಾರ ಮಾಡುವುದನ್ನು ಉತ್ತೇಜಿಸಿದೆ. 

  ತಾಂತ್ರಿಕ ಪ್ರಗತಿಗಳು, ಇಂಗ್ಲಿಷ್ ಮತ್ತು ಫ್ರೆಂಚ್ ನಂತಹ ಜಾಗತಿಕ ಭಾಷೆಗಳ ವ್ಯಾಪಕ ಬಳಕೆಯು ಅರೇಬಿಕ್ ಬಳಕೆಯಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದೆ. ನಮ್ಮ ಮಾತೃಭಾಷೆಯಾದ ಮಲಯಾಳದಲ್ಲೂ  ಹಲವಾರು ಅರೇಬಿಕ್ ಮಿಶ್ರಿತ ವಾಕ್ಯಗಳು ಕಾಣಲು ಸಾಧ್ಯವಾಗುತ್ತದೆ.

ಬರಹದ ಸುಂದರಿ:

   ಲೋಕದಲ್ಲೇ ಅತ್ಯಂತ ಸುಂದರವಾದ ಲಿಪಿ ಹೊಂದಿರುವ ಭಾಷೆ ಅರೇಬಿಕ್ ಭಾಷೆ ಎಂಬುದು ನಿಸ್ಸಂಶಯ ಹೇಳಬಹುದು. ಬರಹದ ಸುಂದರಿ ಎಂಬ‌ ನಾಮವು ಅರೇಬಿಕ್ ಭಾಷೆಗೆ ಸ್ವಂತ. ಮುಖ್ಯವಾಗಿ ಐದು ಲಿಪಿಯನ್ನು ಹೊಂದಿರುವ ಭಾಷೆಯಾಗಿದೆ ಅರೇಬಿಕ್.

1- ಕೂಫಿಲಿಪಿ:- ಅತ್ಯಂತ ಹಳೆಯ ಕಾಲದ ಲಿಪಿಯಾಗಿದೆ ಇದು. ಮುಸ್ಲಿಮರು ಮೊತ್ತ ಮೊದಲು ಸ್ಥಾಪಿಸಿದ ಕೂಫ ಎಂಬ ನಗರದ ನಾಮದಿಂದ ಪ್ರಸಿದ್ಧಿ ಪಡೆದ ಲಿಪಿ.

2-ಖತ್ತುನ್ನ ಸಖ್:- ನಾವು ಸಾಮಾನ್ಯವಾಗಿ ಉಪಯೋಗಿಸುವ ಲಿಪಿ‌ ಹಾಗೂ ಗಲ್ಫ್ ರಾಷ್ಟ್ರಗಳಿಂದ ಕೊಂಡುಬರುವ ಖುರ್-ಆನ್ ಗಳಂತಹಾ ಕಿತಾಬ್ ಗಳಲ್ಲಿ ಕಂಡುಬರುವ ಲಿಪಿಯಾಗಿದೆ.

3-ಖತ್ತುರುಕಅ(ಕೈ ಬರಹ ಲಿಪಿ):- ಮೇಲೆ ಹೇಳಿದ ಲಿಪಿಗಳಿಂದ ತುಂಬಾ ವ್ಯತ್ಯಸ್ಥ ವಾಗಿದೆ ಇದು.ವೇಗದ ಬರಹಕ್ಕೆ ಉತ್ತಮ ಲಿಪಿ ಇದಾಗಿದೆ ಎಂದರು ತಪ್ಪಿಲ್ಲ.

4-ಖತ್ತುದ್ದೀವಾನಿ(ಕಾವ್ಯ ಲಿಪಿ):- ಒಟ್ಟೋಮನ್ ಅಧಿಕಾರಿಯಾದ ಫತ್ತಾಹನ ಕಾಲದಲ್ಲಿ ಜಾರಿಗೆ ಬಂದ ಲಿಪಿ. ಮೈನವಿರೇಳಿಸುವ ರೀತಿಯಲ್ಲಿರುವ ಅತ್ಯಂತ ಆಕರ್ಷಣೀಯವಾದ ಲಿಪಿಯಾಗಿದೆ ಇದು.

5-ಖತ್ತುಲ್ ಫಾರಿಸೀ(ಪರ್ಷಿಯನ್ ಲಿಪಿ):- ಅತ್ಯಂತ ಸುಲಭವಾಗಿ ಸುಂದರವಾಗಿ ಬರೆಯಲು ಸಾಧ್ಯವಿರುವ ಲಿಪಿ.

ಅರಬಿ ಭಾಷೆ ಭಾರತಕ್ಕೆ...

    ಪುರಾತನ ಕಾಲದಿಂದಲೇ ಅರೆಬಿಯನ್ನರು ಸಂಚಾರ ಪ್ರಿಯರಾಗಿದ್ದರು. ಹಲವಾರು ದೇಶಗಳಿಗೆ ಯಾತ್ರೆ ನಡೆಸಿದ ಅವರು ಲೋಕದ ಉದ್ದಗಲಕ್ಕೂ ತಮ್ಮ ಭಾಷೆಯ ಪ್ರಚಾರ ನಡೆಸಿದರು. ಅಂದ ಹಾಗೆ ಭಾರತದಲ್ಲೂ ಅರೇಬಿಕ್ ಭಾಷೆಯು ಜನ್ಮ ತಾಳಿತು. ಹಲವಾರು ವರ್ಷಗಳ ಹಿಂದೆಯೇ ಅರೇಬಿಕ್ ಭಾಷೆಯು ಭಾರತಕ್ಕೆ ಬಂದಿದೆ ಎಂಬುದು ಇತಿಹಾಸಗಳಿಂದ ಸ್ಪಷ್ಟ. ಅಲ್ಲಾಮ ಸಯ್ಯಿದ್ ಸುಲೈಮಾನ್ ಬರೆಯುತ್ತಾರೆ: 'ಅದರಲ್ಲೂ ಮಹಾಭಾರತದ ಕಾಲಘಟ್ಟದಲ್ಲೇ ಭಾರತದಲ್ಲಿ ಅರಬೀ ತಿಳಿದವರು ಇದ್ದರು ಎಂಬುದು ಅದ್ಭುತ' (ಅರಬ್ ವಹಿಂದುಕೇ ತಅಲ್ಲುಕಾತ್). ಸತ್ಯಾರ್ಥಪ್ರಕಾಶಂ ಎಂಬ ಗ್ರಂಥದ ರಚನೆಕಾರರಾದ ಸ್ವಾಮಿ ದಯಾನಂದ ಸರಸ್ವತಿಯವರ ಉಲ್ಲೇಖನೆ: 'ಮಹಾಭಾರತದಲ್ಲಿ ಕೌರವರು ಪಾಂಡವರನ್ನು ಕೊಲ್ಲಲು ಉಪಾಯ ಹೂಡಿದಾಗ ವಿದುರನು ಯುಧಿಷ್ಠಿರನೊಂದಿಗೆ ಅರಬಿ ಭಾಷೆಯಲ್ಲಿ ಮಾತುಕತೆ ನಡೆಸಿದನು'.

- ಸಲ್ಮಾನ್ ಎಲಿಮಲೆ
(ಮುಹಿಮ್ಮಾತ್ ವಿದ್ಯಾರ್ಥಿ)SHARE THIS

Author:

0 التعليقات: