ಮುಖ್ಯಮಂತ್ರಿ ತವರಲ್ಲಿ ಲಾಟರಿ ಮೂಲಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯ
ಮಂಡ್ಯ: ಮುಖ್ಯಮಂತ್ರಿ ಯಡಿಯೂರಪ್ಪ ತವರು ಬೂಕನಕೆರೆ ಗ್ರಾಮ ಪಂಚಾಯತಿ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿ ಸರಿಸಮನಾದ ಮತ ಪಡೆದಿದ್ದರಿಂದ ಫಲಿತಾಂಶ ಡ್ರಾ ಆಗಿತ್ತು. ಬಳಿಕ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಲಾಟರಿ ಮೂಲಕ ಜಯ ಸಾಧಿಸಿದ್ದಾರೆ.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜುಳಾ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರುಕ್ಮಿಣಮ್ಮ ತಲಾ 183 ಮತ ಗಳಿಸಿದ್ದರು. ಬಳಿಕ ಚುನಾವಣಾಧಿಕಾರಿಗಳು ಲಾಟರಿ ಮೂಲಕ ಫಲಿತಾಂಶ ನಿರ್ಧರಿಸಿದ್ದಾರೆ.
ಲಾಟರಿಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಂಜಳಾ ಗೆಲುವು ಸಾಧಿಸಿದ್ದಾರೆ.
0 التعليقات: