Wednesday, 9 December 2020

ರಾಜಕೀಯ ನಿವೃತ್ತಿಯಾಗುತ್ತೇನೆ ಎಂಬುದು ಸುಳ್ಳುಸುದ್ದಿ : ಮಾಜಿ ಸ್ಪೀಕರ್ ರಮೇಶ್ ಕುಮಾರ್


 ರಾಜಕೀಯ ನಿವೃತ್ತಿಯಾಗುತ್ತೇನೆ ಎಂಬುದು ಸುಳ್ಳುಸುದ್ದಿ : ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೋಲಾರ : ರಾಜಕೀಯ ನಿವೃತ್ತಿ ಕುರಿತಂತೆ ಮಾಜಿ ಸ್ಪೀಕರ್, ಕಾಂಗ್ರೆಸ್ ರಮೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ರಾಜಕೀಯದಿಂದ ನಾನು ನಿವೃತ್ತಿಯಾಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಬಂದಿರುವ ಸುದ್ದಿಗಳೆಲ್ಲವೂ ಸುಳ್ಳು ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಹೇಳಿದವರು ಯಾರು? ನಿವೃತ್ತಿಯಾಗಲು ನಾನು ಈಗ ಆರಾಮಾಗಿ ಇಲ್ಲ, ಹಲವು ಜವಾಬ್ದಾರಿಗಳ ಮಧ್ಯೆ ಬಂಧಿಯಾಗಿದ್ದೇನೆ. ಈ ಸುಳ್ಳು ಸುದ್ದಿ ನನ್ನ ಮನಸ್ಸಿಗೆ ತೀವ್ರ ಬೇಸರವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

ನಾನು ನಿವೃತ್ತಿಯಾಗುತ್ತೇನೆ ಎಂದು ಮಾಧ್ಯಮದವರನ್ನು ಕರೆಸಿ ಸುದ್ದಿಗೋಷ್ಠಿ ನಡೆಸಿ ಹೇಳಿದ್ದೇನೆಯೇ?ಎಲ್ಲಿ ಹೇಳಿದ್ದೇನೆ? ವಿಡಿಯೋ ಕ್ಲಿಪ್ಪಿಂಗ್ ಇದ್ದರೆ ತೆರೆಯಿರಿ, ನಿವೃತ್ತಿ ಕೊಡಲು ನಾನು ಅಷ್ಟು ವಿರಾಮವಾಗಿರುವ ಮನುಷ್ಯ ಅಲ್ಲ, ನನ್ನ ಕರ್ತವ್ಯ ಮುಗಿಸಿ ನಾನು ನಿವೃತ್ತಿಯಾಗಬೇಕು ಎಂದರು.



SHARE THIS

Author:

0 التعليقات: