Friday, 18 December 2020

ರೈತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಹೈಲೆಟ್ಸ್‌


 ರೈತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಹೇಳಿದ್ದೇನು? ಇಲ್ಲಿದೆ ಅವರ ಮಾತಿನ ಹೈಲೆಟ್ಸ್‌

ನವದೆಹಲಿ: ಮೂರು ಕೇಂದ್ರ ಕೃಷಿ ಕಾಯಿದೆಗಳನ್ನು ರದ್ದುಪಡಿಸಬೇಕೆಂಬ ಒತ್ತಾಯದ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಗೆ ಬೆಂಬಲ ವಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ತವರು ಜಿಲ್ಲೆ ಮೊರೆನಾದಿಂದ ಕಾಲ್ನಡಿಗೆ ಜಾಥಾ ಆರಂಭಿಸಿದ ನಂತರ ಇಂದು ಮಧ್ಯ ಪ್ರದೇಶದ ರೈತರನ್ನು ಉದ್ದೇಶಿಸಿ ಪಿಎಂ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ. ಇಂದು ಡಿಸೆಂಬರ್ 18ರಂದು ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರದೇಶದ ರೈತರನ್ನು ಉದ್ದೇಶಿಸಿ ಮಾತನಾಡುತ್ತಿದ್ದು ಸುಮಾರು 23 ಸಾವಿರ ಹಳ್ಳಿಗಳಿಗೆ ವಿಡಿಯೋ ಪ್ರಸಾರ ವಾಗುತ್ತಿದೆ.

ರಾತ್ರೋರಾತ್ರಿ ಕಾನೂನುಗಳು ಜಾರಿಯಾಗಿಲ್ಲ. ಹಲವು ದಶಕಗಳಿಂದ ಚರ್ಚೆ, ಸಮಾಲೋಚನೆ ಗಳು ನಡೆದಿವೆ ಎಂದರು. 'ದಶಕಗಳ ಕಾಲ ರೈತರ ಬೇಡಿಕೆಗಳು ಈ ರೀತಿ ಇದ್ದವು. ಇಂದು ನಾವು ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ನೋಡಿದರೆ, ಅದೇ ಭರವಸೆಗಳನ್ನು ನಾವು ಕಾಣುತ್ತೇವೆ' ಎಂದು ಪಿಎಂ ಮೋದಿ ಹೇಳಿದರು.ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಿರುವ ಪ್ರಧಾನಿ ಮೋದಿ, 'ಕೃಷಿ ಸುಧಾರಣೆಯಲ್ಲಿ ಅವರಿಗೆ ಸಮಸ್ಯೆ ಇದೆ ಎಂದು ನನಗನಿಸುತ್ತಿಲ್ಲ ಅಂತ ಅವರು ಹೇಳಿದರು.'ಅಧಿಕಾರದಲ್ಲಿದ್ದಾಗ ಸ್ವಾಮಿನಾಥನ್ ಆಯೋಗದ ವರದಿಯನ್ನು ಹುಸಿಗೊಳಿಸಿತ್ತು. ನಾವು ವರದಿಯನ್ನು ಅಗೆದು ಶಿಫಾರಸು ಗಳನ್ನು ಜಾರಿಗೆ ತಂದಿದ್ದೇವೆ' ಎಂದು ಪಿಎಂ ಮೋದಿ ಅವರು ಯುಪಿಎ ಸರ್ಕಾರದ ವಿರುದ್ದ ಹರಿಹಾಯ್ದರು. ಇನ್ನು ಇದೇ ವೇಳೆ ಮಧ್ಯಪ್ರದೇಶ ರೈತರಿಗೆ ಕಾಂಗ್ರೆಸ್ ನ ಸುಳ್ಳು ಭರವಸೆಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದು ಹೇಳಿದರು.

'ಮಧ್ಯಪ್ರದೇಶದ ರೈತರ ಸಾಲ ಮನ್ನಾ ಮಾಡುವುದಾಗಿ ಅವರು ಭರವಸೆ ನೀಡಿದ್ದರು. ಆದರೆ ನೀವೆಲ್ಲರೂ ಅದನ್ನು ಪಡೆದಿದ್ದೀರಾ?' ಅಂತ ಪ್ರಧಾನಿ ಮೋದಿ ಅವರು ಹೇಳಿದರು. ನೆನಪಿಡಿ, 7-8 ವರ್ಷಗಳ ಹಿಂದೆ ಯೂರಿಯಾ ದ ಪರಿಸ್ಥಿತಿ ಏನಾಗಿತ್ತು? ರಾತ್ರೋರಾತ್ರಿ ರೈತರು ಯೂರಿಯಾ ಕ್ಕಾಗಿ ಕ್ಯೂನಲ್ಲಿ ನಿಲ್ಲುತ್ತಿದ್ದರು. ಯೂರಿಯಾ ಕ್ಕಾಗಿ ರೈತರ ಮೇಲೆ ಲಾಠಿಚಾರ್ಜ್ ಮಾಡಿದ್ದರು. ಇಂದು ಯೂರಿಯಾ ಕೊರತೆ ಬಗ್ಗೆ ಯಾವುದೇ ವರದಿಗಳಿಲ್ಲ, ರೈತರು ಯೂರಿಯಾಕ್ಕಾಗಿ ರೈತರು ಲಾಠಿ ಏಟು ತಿನ್ನುತ್ತಿಲ್ಲ. ರೈತರ ಸಂಕಷ್ಟಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಕಾಳಸಂತೆಯನ್ನು ನಿಲ್ಲಿಸಿ, ಯೂರಿಯಾ ರೈತರ ಹೊಲಕ್ಕೆ ಹೋಗುತ್ತದೆ ಎಂದು ನಾವು ಖಚಿತಪಡಿಸಿದ್ದೇವೆ ಅಂತ ಪ್ರಧಾನಿ ಮೋದಿ ಹೇಳಿದರು. ನಮ್ಮ ಸರ್ಕಾರ ಜಾರಿಗೆ ತಂದ ಪಿಎಂ-ಕಿಸಾನ್ ಯೋಜನೆ ರೈತರಿಗೆ ಪ್ರತಿ ವರ್ಷ ಸುಮಾರು 75 ಸಾವಿರ ಕೋಟಿ ರೂ ತಲುಪುತ್ತಿದೆ. ಅಂದರೆ 10 ವರ್ಷಗಳಲ್ಲಿ ಸುಮಾರು 7 ಲಕ್ಷ ಕೋಟಿ ರೂ ತಲುಪಿದೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಯಾವುದೇ ಯಾವುದೇ ಕಮೀಷನ್ ಗಳಿಲ್ಲ ಹಣ ವರ್ಗಾವಣೆಯಾಗುತ್ತಿದೆ ಅಂತ ಹೇಳಿದರು.

ಈಗ ನಮ್ಮ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಈ ನೀರಾವರಿ ಯೋಜನೆಗಳನ್ನು ಮಿಷನ್ ಮಾದರಿಯಲ್ಲಿ ಪೂರ್ಣಗೊಳಿಸುವ ಲ್ಲಿ ನಿರತವಾಗಿದೆ. ಪ್ರತಿ ಹೊಲಕ್ಕೂ ನೀರು ತಲುಪಿಸುವ ಕೆಲಸ ಮಾಡುತ್ತಿದ್ದೇವ ಅಂ ತಹೇಳಿದರು. ನಮ್ಮ ಸರ್ಕಾರ ಸಿರಿಧಾನ್ಯ ಬೆಳೆಯುವ ರೈತರಿಗೆ ಜೇನು ಸಾಕಣೆ, ಪಶುಸಂಗೋಪನೆ, ಮೀನುಗಾರಿಕೆ ಪ್ರೋತ್ಸಾಹ ನೀಡುತ್ತಿದೆ.


SHARE THIS

Author:

0 التعليقات: