ಕ್ಲಾಸ್ ರೂಮ್ ಒಳಗೆಯೇ ಗೆಳತಿಯನ್ನು ಮದುವೆಯಾದ ಹೈಸ್ಕೂಲ್ ವಿದ್ಯಾರ್ಥಿ!
ರಾಜಮಂಡ್ರಿ (ಆಂಧ್ರಪ್ರದೇಶ): ಅತ್ಯಂತ ಅಚ್ಚರಿ ಹಾಗೂ ಪಾಲಕರಿಗೆ ಗಾಬರಿ ಹುಟ್ಟಿಸುವಂಥ ಘಟನೆಯೊಂದು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ. ಅದೇನೆಂದರೆ ಶಾಲೆಯ ಒಳಗೇ ವಿದ್ಯಾರ್ಥಿಯೊಬ್ಬ, ತನ್ನ ಕ್ಲಾಸ್ಮೇಟ್ ವಿದ್ಯಾರ್ಥಿನಿಗೆ ತಾಳಿ ಕಟ್ಟಿ ಮದುವೆ ಮಾಡಿಕೊಂಡಿದ್ದಾನೆ!
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ರಾಜಮಂಡ್ರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳು 17 ರಂದು ಈ ವಿವಾಹ ನಡೆದಿದ್ದು, ಅದರ ಫೋಟೋ ಇದೀಗ ವೈರಲ್ ಆಗಿದೆ.
ತಮ್ಮ ಮಕ್ಕಳು ಈ ರೀತಿ ಮಾಡಿದ್ದಾರೆ ಎಂದು ಪಾಲಕರಿಗೆ ಅರಿವೇ ಇರಲಿಲ್ಲ. ಯಾವಾಗ ಈ ಫೋಟೋ ವೈರಲ್ ಆಗಿ ಅವರ ಕಣ್ಣಿಗೂ ಬಿತ್ತೋ, ವಿದ್ಯಾರ್ಥಿಗಳ ಪಾಲಕರು ದಂಗಾಗಿಹೋಗಿದ್ದಾರೆ. ವಿವಾಹವು ವಿನೋದಕ್ಕಾಗಿ ನಡೆದಿದೆಯೆ, ಯಾರಿಗಾದರೂ ಚಾಲೆಂಜ್ ಮಾಡಿರುವುದಕ್ಕೆ ನಡೆದಿದೆಯೇ ಅಥವಾ ನಿಜವಾಗಿಯೂ ಇವರಿಬ್ಬರು ಪ್ರೇಮಿಗಳಾಗಿದ್ದು, ನಿಜವಾಗಿಯೂ ಮದುವೆ ಮಾಡಿಕೊಂಡಿದ್ದಾರೆಯ? ಈ ಫೋಟೋದ ಅಸಲಿಯತ್ತೇನು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ವಿಷಯ ಕಾಲೇಜು ಪ್ರಾಂಶುಪಾಲರಿಗೆ ತಿಳಿದಿದ್ದು, ಇಬ್ಬರನ್ನೂ ಶಾಲೆಯಿಂದ ಹೊರಹಾಕಲಾಗಿದೆ. ಟಿ.ಸಿ ಕೊಟ್ಟು ಕಳುಹಿಸಿರುವುದಾಗಿ ತಿಳಿದುಬಂದಿದೆ.
0 التعليقات: