ಗ್ರಾಹಕರಿಗೆ ಸಿಹಿಸುದ್ದಿ : ಈರುಳ್ಳಿ ಬೆಲೆಯಲ್ಲಿ ಮತ್ತಷ್ಟು ಇಳಿಕೆ
ಬೆಂಗಳೂರು : ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಈರುಳ್ಳಿ ದರ ಇದೀಗ ಮತ್ತಷ್ಟು ಇಳಿಕೆಯಾಗಿದ್ದು, ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 25-26 ರೂ. ಗೆ ಮಾರಾಟವಾಗುತ್ತಿದೆ.
ಕೆಲ ದಿನಗಳ ಹಿಂದೆ ಕೆ.ಜಿ .ಈರುಳ್ಳಿ 100 ರೂ. ಗಡಿ ದಾಟಿತ್ತು. ಬಳಿಕ ಹಂತ ಹಂತವಾಗಿ ಬೆಲೆ ಇಳಿಕೆಯಾಗಿದ್ದರೂ.ಇದೀಗ ಇನ್ನಷ್ಟು ಕುಸಿತವಾಗಿದೆ. ಈಗ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗುತ್ತಿದೆ. ಇದರಿಂದ ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಬೆಲೆಯಲ್ಲಿ ಕುಸಿತ ಕಂಡಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 40-45 ರೂ, ಹಾಪ್ ಕಾಮ್ಸ್ 66 ರೂ.ಗೆ ಈರುಳ್ಳಿ ಮಾರಾಟವಾಗುತ್ತಿದೆ.
0 التعليقات: