ರಾಯಚೂರು; ಪ್ರೀತಿಗಾಗಿ ನಿಶ್ಚಿತಾರ್ಥವಾಗಿದ್ದ ಹುಡುಗನನ್ನು ಸಿನಿಮೀಯ ರೀತಿ ಕೊಲೆ ಮಾಡಿದ ಹುಡುಗಿ
ರಾಯಚೂರು: ಎಲ್ಲವೂ ಸರಿ ಇದ್ದಿದ್ದರೆ ಇಂದು ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಮದುವೆಯ ಸಿದ್ದತೆಯಲ್ಲಿರುವಾಗಲೇ ವರ ನಾಪತ್ತೆ, ವರನನ್ನು ಹುಡುಕುತ್ತಿರುವಾಗ ಬಯಲಾಗಿದ್ದು ಸಿನಿಮೀಯ ರೀತಿಯ ಕೊಲೆ ಪ್ರಕರಣ. ಪ್ರೀತಿಗಾಗಿ ವರನನ್ನೆ ಮುಗಿಸಿದ ಧಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಅನ್ವರಿ ಬಳಿಯಲ್ಲಿ ನವೆಂಬರ್ 29 ರಂದು ಹೊಲದಲ್ಲಿ ಶವವನ್ನು ಲಿಂಗಸಗೂರು ವಿಭಾಗದ ಸಹಾಯಕ ಆಯುಕ್ತರ ಮುಂದೆ ತೆಗೆದು ಸಿರವಾರ ಪೊಲೀಸರು ಪಂಚನಾಮೆ ಮಾಡಿದರು. ಈ ಸಂದರ್ಭದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇಲ್ಲಿ ಆಗಿರುವ ಘಟನೆ ಪಕ್ಕ ಸಿನಿಮೀಯ ಶೈಲಿಯಲ್ಲಿದ್ದು ಮದುವೆಯಾಗಬೇಕಾದವನ್ನು ಮಸಣಕ್ಕೆ ಕಳುಹಿಸಿದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಸಿರವಾರದ ಹುಸೇನಸಾಬ ಹಾಗು ಖಾಸಿಂ ಎಂಬುವವರ ಏಕೈಕ ಪುತ್ರ ಮಹಿಬೂಬಸಾವ. ಸಿರವಾರದಲ್ಲಿ ಖಾಸಗಿ ಫೈನಾನ್ಸ್ ನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಮಗನಿಗೆ ಮದುವೆ ಮಾಡುವ ಸಲುವಾಗಿ ಹುಸೇನರ ತಂಗಿಯ ಮಗಳನ್ನು ಕಳೆದ ವರ್ಷ ನಿಶ್ಚಯ ಮಾಡಿಕೊಂಡಿದ್ದರು. ಇದೇ ಡಿಸೆಂಬರ್ 2 ರಂದು ರೋಡಲ ಬಂಡಿಯಲ್ಲಿ ಮದುವೆ ಮಾಡಲಿದ್ದರು. ಆದರೆ, ಕಳೆದ ನವಂಬರ್ 16 ರಂದು ಮಹಿಬೂಬಸಾಬ ನಾಪತ್ತೆಯಾದ, ನಾಪತ್ತೆಯಾದ ನಂತರ ಎಲ್ಲಿ ಹೋದ ಎಂಬ ಬಗ್ಗೆ ಮಾಹಿತಿ ಸಿಗಲಿಲ್ಲ. ಈ ಕುರಿತು ನವಂಬರ್ 18 ರಂದು ಸಿರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸಿದ ನಂತರ ಪೊಲೀಸರು ತನಿಖೆ ಆರಂಭಿಸಿದರು. ಮೊದಲು ಮಹಿಬೂಬನ ಫೋನು ಸಂಪರ್ಕಕ್ಕೆ ಯತ್ನಿಸಿದಾಗ ಈ ಫೋನು ಬೆಂಗಳೂರಿನಲ್ಲಿತ್ತು. ಎರಡು ದಿನಗಳ ನಂತರ ಸ್ವಿಚ್ಛ ಆಪ್ ಆಗಿದೆ. ಆದರೂ ಬಿಡದ ಪೊಲೀಸರು ಯುವತಿಯ ಫೋನು ಮಾಹಿತಿ ಸಂಗ್ರಹಿಸಿದಾಗ ಆಕೆಯೊಂದಿಗೆ ರೋಡಲಬಂಡಾದವರೆ ಆದ ಶಬ್ಬೀರ ಎಂಬರೊಂದಿಗೆ ಫೋನು ಸಂಪರ್ಕ ಅವರಿಬ್ಬರ ಮಧ್ಯೆ ಪ್ರೀತಿ ಇರುವುದು ದೃಡಪಟ್ಟಿದೆ. ಪೊಲೀಸರು ಶಬ್ಬೀರನನ್ನು ವಿಚಾರಣೆ ಮಾಡಿದಾಗ ತಾನು, ತನ್ನ ಸ್ನೇಹಿತರಾದ ಚಂದ್ರು, ಫಯಾಜ್ ಸೇರಿಹಿಬೂಬರನ್ನು ಸಿರವಾರದಿಂದ ಕರೆದುಕೊಂಡು ಹೋಗಿ ಅನ್ವರಿ ಸೀಮಾಂತರದ ಹೊಲವೊಂದರಲ್ಲಿ ಕತ್ತು ಹಿಚಕಿ ಕೊಲೆ ಮಾಡಿ ಮುಚ್ಚಿ ಹಾಕಿದ್ದಾಗಿ ಬಾಯಿ ಬಿಟ್ಟಿದ್ದಾನೆ.
ಈ ಮಧ್ಯೆ ಮಹಿಬೂಬ ನಾಪತ್ತೆಯಾದ ನಂತರ ಹುಡುಕಾಟ ನಡೆಯುತ್ತಿರುವಾಗಲೇ ಮಹಿಬೂಬ ಅಕ್ಕ ಸಲ್ಮಾ ಎಂಬುವವರಿಗೆ ಆತನ ಫೋನಿನಿಂದ ಮೆಸೆಜ್ ಕಳುಹಿಸಿ ನಾನು ಬೇರೆಯಳೊಂದಿಗೆ ಹೋಗುತ್ತಿದ್ದೇನೆ ಎಂದು ಮೆಸೆಜ್ ಬರುತ್ತದೆ. ಆದರೆ, ಈ ಮೆಸೆಜ್ ತಮ್ಮ ಅಣ್ಣ ಕಳುಹಿಸಿದ್ದಲ್ಲ ಎಂಬ ಅನುಮಾನಗೊಂಡು ತನಿಖೆಯನ್ನು ವಿವಿಧ ಹಂತದಲ್ಲಿ ಪೊಲೀಸರು ಒಂದು ಕಡೆ ಮಾಡುತ್ತಿದ್ದರೆ ಮಹಿಬೂಬ ಸ್ನೇಹಿತರು ಸಹ ಹುಡುಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯುವತಿಯ ಫೋನು ಸಿಕ್ಕ ನಂತರ ಶಬ್ಬೀರ ಪ್ರಕರಣದ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಹೇಳುವಾಗ ಮಹಿಬೂಬನನ್ನು ಮೊದಲು ಫಯಾಜ್ ಬೈಕ್ ನಲ್ಲಿ ಕರೆದುಕೊಂಡು ಹೋಗುವುದು ನಂತರ ಚಂದ್ರು ಆತನನ್ನು ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತದೆ.
ಇದರಿಂದ ಅನುಮಾನಗೊಂಡು ತನಿಖೆ ಮಾಡಿದಾಗ ಈ ಮೂರು ಜನರು ಸೇರಿ ಕವಿತಾಳ ದಲ್ಲಿ ಪಾರ್ಟಿ ಮಾಡಿ ನಂತರ ಕೊಲೆ ಮಾಡಿದ್ದಾರೆ. ಯಾರಿಗೂ ಗೊತ್ತಾಗಬಾರದೆಂದು ಹೊಲದಲ್ಲಿ ಹೂತು ಬಂದಿದ್ದಾರೆ. ಇದರಲ್ಲಿ ಮಹಿಬೂಬ ಸ್ನೇಹಿತರ ನಿರಂತರ ಪ್ರಯತ್ನದಿಂದಾಗಿ ಮಹಿಬೂಬು ಕೊಲೆಯಾಗಿರುವದು ಬಯಲಾಗಿದೆ. ಈ ಮಧ್ಯೆ ಶಬ್ಬೀರ ಹಾಗು ಯುವತಿಗೆ ಎರಡು ಮೂರು ವರ್ಷಗಳಿಂದ ಪ್ರೀತಿ ಪ್ರೇಮವಿತ್ತು ಎನ್ನಲಾಗಿದೆ, ಆದರೂ ಮಾವನ ಮಗನೊಂದಿಗೆ ಯುವತಿಯ ನಿಶ್ವಿತಾರ್ಥ ಮಾಡಲಾಗಿದೆ.
ಈ ಮದುವೆ ತಪ್ಪಿಸುವ ಉದ್ದೇಶದಿಂದ ಶಬ್ಬೀರ ಪ್ಲಾನ್ ಮಾಡಿದ್ದಾರೆ. ಒಂದು ವರ್ಷದ ಹಿಂದೆಯೇ ನಿಶ್ಚಿತಾರ್ಥವಾಗಿದ್ದರಿಂದ ಮಹಿಬೂಬನೊಂದಿಗೆ ಸ್ನೇಹ ಬೆಳೆಸಿದ್ದಾರೆ. ಈ ಸ್ನೇಹವೇ ಮಹಿಬೂಬನಿಗೆ ಮುಳುವಾಗಿದೆ. ಏನು ಅರಿಯದ ಮಹಿಬೂಬನನ್ನು ಮೋಸದಿಂದ ಕರೆದುಕೊಂಡು ಹೋಗಿ ಯುವತಿಯ ಪ್ರಿಯಕರ ಸ್ನೇಹಿತರು ಕೊಲೆ ಮಾಡಿದ್ದಾರೆ. ನಮ್ಮ ಅಣ್ಣ ಯಾವ ರೀತಿ ಸಾವನ್ನಪ್ಪಿದ್ದಾನೆ. ಅದಕ್ಕಿಂತ ಕಠಿಣ ಶಿಕ್ಷೆ ನೀಡಬೇಕೆಂದು ಮಹಿಬೂಬ ಅಕ್ಕ ಆಗ್ರಹಿಸಿದ್ದಾಳೆ.
ಮದುವೆಯ ಸಂದರ್ಭದಲ್ಲಿ ಮಗನನ್ನು ಕಳೆದುಕೊಂಡು ತಾಯಿ ರೋಧಿಸುತ್ತಿದ್ದಾಳೆ. ಸಂಬಂಧಿಕರ ಮಗಳನ್ನೆ ಮಗನಿಗೆ ಮದುವೆ ಮಾಡುವಾಗ ಈ ರೀತಿ ಕೊಲೆಯಾಗಿರುವುದು ಅವರಲ್ಲಿ ಅಕ್ರಂದನಕ್ಕೆ ಕಾರಣವಾಗಿದೆ. ಸಿರವಾರ ಪೊಲೀಸರು ನಾನಾ ಆಯಾಮಗಳಿಂದ ತನಿಖೆ ಮಾಡಿದ ನಂತರ ಈ ಪ್ರಕರಣ ಬಯಲಿಗೆ ಬಂದಿದೆ. ಈ ಪ್ರಕರಣದಲ್ಲಿ ಯುವತಿ ಹಾಗು ಶಬ್ಬೀರರನ್ನು ಬಂಧಿಸಲಾಗಿದೆ. ಇನ್ನಿಬ್ಬರ ಬಗ್ಗೆ ತನಿಖೆ ನಡೆದಿದ್ದು ಇಷ್ಟರಲ್ಲಿಯೇ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಕಂ ಪ್ರಕಾಶ ತಿಳಿಸಿದ್ದಾರೆ.ಇತ್ತೀಚಿಗೆ ದೃಶ್ಯ ಸಿನಿಮಾ ಮಾದರಿಯಲ್ಲಿರುವ ಈ ಪ್ರಕರಣ ರೋಚಕವಾಗಿದ್ದು ಪ್ರೀತಿ ಪ್ರೇಮ ಎಂಬುವುದು ಬಲಿ ಪಡೆಯುತ್ತದೆ ಎಂಬುವದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
0 التعليقات: