Tuesday, 22 December 2020

ಧಾರವಾಡ: ಚುನಾವಣೆ ದಿನವೇ ಅಭ್ಯರ್ಥಿ ಆತ್ಮಹತ್ಯೆ


 ಧಾರವಾಡ: ಚುನಾವಣೆ ದಿನವೇ ಅಭ್ಯರ್ಥಿ ಆತ್ಮಹತ್ಯೆ

ಧಾರವಾಡ: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಮಂಗಳವಾರ ನಡೆಯುತ್ತಿದ್ದ ಸಂದರ್ಭದಲ್ಲೇ ಗರಗ ಗ್ರಾಮ ಪಂಚಾಯಿತಿ ಅಭ್ಯರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ 2ನೇ ವಾರ್ಡ್‌ನ ಅಭ್ಯರ್ಥಿ ದಾಮೋದರ ಯಲಿಗಾರ (25) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಚುನಾವಣೆಯ ಕಾರಣದಿಂದ ಮಾನಸಿಕ ಒತ್ತಡದಿಂದ ಹೀಗೆ ಮಾಡಿಕೊಂಡಿದ್ದಾರೆ ಎಂಬ ಚರ್ಚೆ ಗ್ರಾಮದಲ್ಲಿ ನಡೆದಿದೆ.

ಬಿಜೆಪಿ ಕಾರ್ಯಕರ್ತರಾಗಿದ್ದ ದಾಮೋದ ಅವರ ಅ-ವರ್ಗದಡಿ ಸ್ಪರ್ಧಿಸಿದ್ದರು. ಪ್ರಕರಣ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಯಲಿಗಾರ ಅವರ ಮನೆ ಮುಂದೆ ಸೇರಿದರು. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.


SHARE THIS

Author:

0 التعليقات: