ಇಂದಿನಿಂದ ಶಬರಿಮಲೆ ದೇವಾಲಯ ಓಪನ್ : ಕೊರೊನಾ ನೆಗೆಟಿವ್ ರಿಪೋರ್ಟ್ ಇದ್ದವರಿಗೆ ಮಾತ್ರ ಪ್ರವೇಶ!
ಶಬರಿಮಲೆ : ಇಂದಿನಿಂದ ಶಬರಿಮಲೆ ದೇಗುಲ ಓಪನ್ ಆಗಲಿದ್ದು, ಜನವರಿ 19 ರವರೆಗೂ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಕರವಿಳಕ್ಕು ಅಂಗವಾಗಿ ಇಂದಿನಿಂದ ಶಬರಿಮಲೆ ದೇಗುಲ ಓಪನ್ ಆಗಲಿದ್ದು, ಪ್ರತಿದಿನ 5 ಸಾವಿರ ಭಕ್ತರು ದರ್ಶನ ಪಡೆಯಲು ಅನುಮತಿ ನೀಡಲಾಗಿದೆ. ಜೊತೆಗೆ ಆನ್ ಲೈನ್ ನಲ್ಲೂ ಭಕ್ತರು ದೇವರ ದರ್ಶನ ಪಡೆಯಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಇನ್ನು ದೇವಸ್ಥಾನಕ್ಕೆ ಬರುವ ಭಕ್ತರು ಕೊರೊನಾ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯವಾಗಿದ್ದು, ರಿಪೋರ್ಟ್ ಇಲ್ಲದ ಭಕ್ತರಿಗೆ ಅವಕಾಶ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
0 التعليقات: