Saturday, 26 December 2020

ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರ ವಿರೋಧಿ ಕಾನೂನಿಗೆ ಕ್ಯಾಬಿನೆಟ್​ ಅಸ್ತು


 ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರ ವಿರೋಧಿ ಕಾನೂನಿಗೆ ಕ್ಯಾಬಿನೆಟ್​ ಅಸ್ತು

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಬಳಿಕ ಇದೀಗ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ಲವ್​ ಜಿಹಾದ್​ ವಿರುದ್ಧ ಸಮರ ಸಾರಿದ್ದಾರೆ.

ಶನಿವಾರ ಧಾರ್ಮಿಕ ಮತಾಂತರ ವಿರೋಧಿ ಕಾನೂನನ್ನ ಮಧ್ಯಪ್ರದೇಶ ಕ್ಯಾಬಿನೆಟ್​ ಅಂಗೀಕರಿಸಿದೆ.

ಈ ಮಸೂದೆ ಜಾರಿಗೆ ಬಂದ ಬಳಿಕ ಲವ್​ ಜಿಹಾದ್​ ಆರೋಪ ಸಾಬೀತಾದ ವ್ಯಕ್ತಿಗೆ 10 ವರ್ಷಗಳ ಜೈಲು ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತೆ.

ವಿಧಾನಸಭೆ ಅಧಿವೇಶನಕ್ಕೂ ಮುನ್ನ ಶನಿವಾರ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚವ್ಹಾಣ್​ ನೇತೃತ್ವದ ಸಂಪುಟ ಸಭೆಯಲ್ಲಿ ಧರ್ಮ ಸ್ವಾತಂತ್ರ್ಯ ಸಭೆ 2020ಯನ್ನ ಅಂಗೀಕರಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗಲಿದೆ. ಹಾಗೂ ರಾಜ್ಯಪಾಲರ ಅಂಕಿತದ ಬಳಿಕ ಮಸೂದೆ ರಾಜ್ಯದಲ್ಲಿ ಜಾರಿಗೆ ಬರಲಿದೆ.

ಈ ಮಸೂದೆಯ ಪ್ರಕಾರ ವ್ಯಕ್ತಿಯ ಜೊತೆಗೆ ಆತನಿಗೆ ಸಹಾಯ ಮಾಡಿದ ಸಂಘಟನೆಗಳ ಮೇಲೂ ಪ್ರಕರಣ ದಾಖಲಿಸಬಹುದಾಗಿದೆ. ಈ ಆರೋಪದಡಿಯಲ್ಲಿ ಕನಿಷ್ಟ 25 ಸಾವಿರ ರೂಪಾಯಿ ದಂಡ ಹಾಗೂ 1 ರಿಂದ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತೆ. ಒಂದು ವೇಳೆ ಎಸ್​ಸಿ & ಎಸ್​ಟಿಗೆ ಸೇರಿದ ವ್ಯಕ್ತಿ ಮತಾಂತರಗೊಂಡರೆ ಅವರಿಗೆ 2 ರಿಂದ 10 ವರ್ಷಗಳ ಜೈಲು ಶಿಕ್ಷೆ ಹಾಗೂ ಗರಿಷ್ಟ 1 ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.


SHARE THIS

Author:

0 التعليقات: