Thursday, 24 December 2020

ಹರಿಯಾಣದಲ್ಲಿ ರೈತರ ವಿರುದ್ಧ ದಾಖಲಾಯ್ತು ಕೊಲೆ ಯತ್ನ ಕೇಸ್​.!


 ಹರಿಯಾಣದಲ್ಲಿ ರೈತರ ವಿರುದ್ಧ ದಾಖಲಾಯ್ತು ಕೊಲೆ ಯತ್ನ ಕೇಸ್​.!

ಹರಿಯಾಣ ಸಿಎಂ ಮನೋಹರ ಲಾಲ್​ ಖಟ್ಟರ್​ ಬೆಂಗಾವಲು ವಾಹನಗಳನ್ನ ತಡೆದು ಅದರ ಮೇಲೆ ಕೋಲುಗಳನ್ನ ಎಸೆಯಲಾಗಿದೆ ಎಂದು ಆರೋಪಿಸಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 13 ರೈತರ ಮೇಲೆ ಕೊಲೆ ಯತ್ನ ಹಾಗೂ ಗಲಭೆ ನಡೆಸಿದ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್​ ಇಲಾಖೆಯ ಈ ಕ್ರಮದ ವಿರುದ್ಧ ಹರಿಣಯಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಮಾಜಿ ಕೇಂದ್ರ ಸಚಿವೆ ಹಾಗೂ ದಲಿತ ನಾಯಕಿ ಕುಮಾರಿ ಸೆಲ್ಜಾ ಆಕ್ರೋಶ ಹೊರ ಹಾಕಿದ್ದಾರೆ. ಇದು ಸರ್ಕಾರದ ಹತಾಶೆಯ ಗುಣವನ್ನ ತೋರಿಸುತ್ತಿದೆ. ಇದು ಪ್ರಜಾಪ್ರಭುತ್ವದ ಸಾವಾಗಿದೆ ಎಂದು ಕೆಂಡಕಾರಿದ್ದಾರೆ.

ಮಂಗಳವಾರ ಪ್ರತಿಭಟನಾ ನಿರತ ರೈತರು ಸಿಎಂ ಖಟ್ಟರ್​ ಮತ್ತವರ ಬೆಂಗಾವಲು ವಾಹನಕ್ಕೆ ಕಪ್ಪು ಬಾವುಟವನ್ನ ಪ್ರದರ್ಶಿಸಿದ್ದರು.


SHARE THIS

Author:

0 التعليقات: