Wednesday, 2 December 2020

ಜಾಗ್ವಾರ್​ ಹಾಗೂ ಚಿರತೆ ನಡುವಿನ ವ್ಯತ್ಯಾಸ ಗುರುತಿಸಬಲ್ಲಿರಾ.?


ಜಾಗ್ವಾರ್​ ಹಾಗೂ ಚಿರತೆ ನಡುವಿನ ವ್ಯತ್ಯಾಸ ಗುರುತಿಸಬಲ್ಲಿರಾ.?


ವಿಶ್ವ ಜಾಗ್ವಾರ್​ ದಿನದ ಅಂಗವಾಗಿ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಪರ್ವೀನ್ ಕಾಸ್ವಾನ್​ ಎಂಬವರು ಟ್ವೀಟಿಗರಿಗೆ ವಿಶೇಷವಾದ ಟಾಸ್ಕ್​ ಒಂದನ್ನ ನೀಡಿದ್ದಾರೆ.

ಚಿರತೆ ಜಾತಿಗೆ ಸೇರಿದ ಎರಡು ಪ್ರಾಣಿಗಳ ಫೋಟೋ ಪೋಸ್ಟ್ ಮಾಡಿರುವ ಪರ್ವೀನ್ ಚಿರತೆ ಹಾಗೂ ಜಾಗ್ವಾರ್​ ನಡುವಿನ ವ್ಯತ್ಯಾಸ ಹುಡುಕಿ ಎಂಬರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ.

ಎರಡು ಪ್ರಾಣಿಗಳ ಫೋಟೋ ಪೋಸ್ಟ್ ಮಾಡಿ ಅದಕ್ಕೆ ಕ್ಯಾಪ್ಶನ್​ ನೀಡಿರುವ ಪರ್ವೀನ್, ನೋಡೋಣ ಇವೆರಡು ಫೋಟೋಗಳಲ್ಲಿ ಯಾವುದು ಜಾಗ್ವಾರ್​ ಹಾಗೂ ಯಾವುದು ಚಿರತೆ ಅನ್ನೋದನ್ನ ಎಷ್ಟು ಮಂದಿ ಕಂಡು ಹಿಡೀತಾರೆ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋಗೆ ಸಾಕಷ್ಟು ಲೈಕ್ಸ್, ವೀವ್ಸ್ ಹಾಗೂ ಕಾಮೆಂಟ್​ ದೊರಕಿದೆ. ಅನೇಕರು ಚಿರತೆ, ಚೀತಾ, ಜಾಗ್ವಾರ್​ ಹಾಗೂ ಪ್ಯಾಂಥರ್​ಗಳಲ್ಲಿ ವ್ಯತ್ಯಾಸ ಹುಡುಕೋದೇ ಕಷ್ಟ ಎಂದು ಬರೆದಿದ್ದಾರೆ.

ಜಾಗ್ವಾರ್​ ಹಾಗೂ ಚಿರತೆಯಲ್ಲಿ ವ್ಯತ್ಯಾಸ ಹುಡುಕೋದು ಕೊಂಚ ಕಷ್ಟದ ಕೆಲಸವೇ. ಜಾಗ್ವಾರ್​​ಗಳು ಮಧ್ಯ ಹಾಗೂ ದಕ್ಷಿಣ ಅಮೆರಿಕದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.

ಅಲ್ಲದೇ ಇವುಗಳು ದೊಡ್ಡ ಜಾತಿಯ ಬೆಕ್ಕುಗಳು. ಇತ್ತ ಚಿರತೆಗಳು ಸ್ವಲ್ಪ ಸಣ್ಣ ಜಾತಿಯ ಬೆಕ್ಕುಗಳು. ಇವು ಹೆಚ್ಚಾಗಿ ಆಫ್ರಿಕಾ ಹಾಗೂ ಏಷಿಯಾದಲ್ಲಿ ಕಾಣಸಿಗುತ್ತವೆ.

ಜಾಗ್ವಾರ್ಗಳ ಮೂಳೆ ಹಾಗೂ ಹಲ್ಲುಗಳು ಸಿಕ್ಕಾಪಟ್ಟೆ ಬಲಶಾಲಿಯಾಗಿರುತ್ತೆ. ಆದರೆ ಚಿರತೆಗಳು ಜಾಗ್ವಾರ್​ಗೆ ಹೋಲಿಸಿದ್ರೆ ಕೊಂಚ ಕಡಿಮೆ ಬಲಶಾಲಿ. ಜಾಗ್ವಾರ್​ಗಳು ನೀರಲ್ಲಿ ಈಜೋದನ್ನ ತುಂಬಾನೆ ಇಷ್ಟಪಡುತ್ತೆ. ಆದರೆ ಚಿರತೆಗಳಿಗೆ ನೀರಂದ್ರೆ ಆಗಲ್ವಂತೆ.


SHARE THIS

Author:

0 التعليقات: