ಅರಬಿಕ್ ಡೇ; ವೈವಿಧ್ಯಮಯ ಪದ್ಧತಿಗಳೊಂದಿಗೆ ಇಶಾಅತುಸ್ಸುನ್ನ
ಮುಹಿಮ್ಮಾತ್: ಮುಹಿಮ್ಮಾತ್ ಕಾಲೇಜ್ ಆಫ್ ಇಸ್ಲಾಮಿಕ್ ಸಯನ್ಸ್ ವಿದ್ಯಾರ್ಥಿ ಸಂಘಟನೆಯಾದ ಇಶಾಅತುಸ್ಸುನ್ನ, ಅರಬಿಕ್ ಡೇಯ ಭಾಗವಾಗಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಕುಲ್ಲಿಯ್ಯ ಹೆಚ್.ಒ.ಡಿ ಅಬ್ದುರ್ರಹ್ಮಾನ್ ಅಹ್ಸನಿ ಯವರ ಅಧ್ಯಕ್ಷತೆಯಲ್ಲಿ ಕುಲ್ಲಿಯ್ಯ ಪ್ರಿನ್ಸಿಪಾಲ್ ಹಸನುಲ್ ಅಹ್ದಲ್ ತಂಙಳ್ ಉದ್ಘಾಟಿಸಿದರು. ಫತ್ತಾಹ್ ಸಅದಿ ಶುಭಕೋರಿದರು. ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಅಬ್ದುಸ್ಸಲಾಂ ಅಹ್ಸನಿ ಪಝಮಲ್ಲೂರ್, ಮೂಸ ಸಖಾಫಿ ಕಳತ್ತೂರ್, ಖಾದರ್ ಸಖಾಫಿ ಮೊಗ್ರಾಲ್, ಉಮರ್ ಸಖಾಫಿ ಕರ್ನೂರ್, ಅಬ್ಬಾಸ್ ಸಖಾಫಿ ಕಾವುಂಪುರಂ, ಅಬ್ದುಲ್ಲಾ ಅಹ್ಸನಿ ಮುಂತಾದವರು ಭಾಗವಹಿಸಿದರು.
ಅರಬೀ ಭಾಷೆಯ ಮಹತ್ವಗಳನ್ನು ಎತ್ತಿ ತೋರಿಸುತ್ತಾ ವಿದ್ಯಾರ್ಥಿಗಳು ಡಾಕ್ಯುಮೆಂಟರಿ ಪ್ರದರ್ಶನ, ಮ್ಯಾಗಝಿನ್ ಪ್ರಕಾಶನ, ಚರ್ಚಾ ವೇದಿಕೆ, ಬುಲೆಟಿನ್ ಮುಂತಾದ ಕಲಿಕಗೆ ಪೂರಕವಾದ ಪದ್ಧತಿಗಳನ್ನು ಮಾಡಿದರು. ಇಶಾಅತುಸ್ಸುನ್ನ ಜನರಲ್ ಸೆಕ್ರೆಟರಿ ರಾಫಿ ಅಯ್ಯಂಗೇರಿ ಸ್ವಾಗತ ಮತ್ತು ಹಾಫಿಳ್ ಉನೈಸ್ ಕಳತ್ತೂರ್ ಕೃತಜ್ಞತೆ ಸಲ್ಲಿಸಿದರು.
0 التعليقات: