ಬೆಂಗಳೂರಲ್ಲಿ ನೈಜೀರಿಯಾ ಮೂಲದ ಪ್ರಜೆ, ಕೊಕೇನ್ ಕಿಂಗ್ ಪಿನ್ ಬಂಧನ
ಬೆಂಗಳೂರು (16-12-2020): ತಿಂಗಳ ಕಾಲ ನಡೆದ ತನಿಖೆಯ ನಂತರ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ನಗರದ ವಿವಿಧಡೆ ಕೊಕೇನ್ ಸರಬರಾಜು ಮಾಡುತ್ತಿದ್ದ ನೈಜೀರಿಯಾ ಮೂಲದ ಕಿಂಗ್ ಪಿನ್ನನ್ನು ಬಂಧಿಸಿದ್ದಾರೆ.
ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಮಾದಕ ದ್ರವ್ಯ ಮತ್ತು ಸೈಕೋಟ್ರಾಪಿಕ್ ವಸ್ತುಗಳ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳವಾರ ಬೆಳಗಿನ ಜಾವ ಬೆಂಗಳೂರಿನ ಬಾಣಸವಾಡಿಯ ಬಾಡಿಗೆ ಮನೆಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ತಂಡ ಬೆಂಗಳೂರಿನಲ್ಲಿ ಕೊಕೇನ್ ಪೂರೈಕೆದಾರರ ಬಗ್ಗೆ ತನಿಖೆ ಆರಂಭಿಸಿ ಹಲವು ತಿಂಗಳು ಕಳೆದಿದೆ.
ಬೆಂಗಳೂರು ಸಿಸಿಬಿಯ ಕೊಕೇನ್ ಸರಬರಾಜು ಮಾಡುವ ಕಿಂಗ್ ಪಿನ್ ಈ ಹಿಂದೆ ಬಂಧಿತರಾದ ಎಲ್ಲ ನೈಜೀರಿಯಾ ಡ್ರಗ್ ಪೆಡ್ಲರ್ಗಳೊಂದಿಗೆ ಸಂಪರ್ಕದಲ್ಲಿದ್ದ. ಅವರು ಚೀಫ್ನಿಂದ ಕೊಕೇನ್ ಖರೀದಿಸಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
0 التعليقات: