Tuesday, 29 December 2020

ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನೇ ಅಟ್ಟಾಡಿಸಿದ ರೈತರು!


ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನೇ ಅಟ್ಟಾಡಿಸಿದ ರೈತರು!

ಕೇಂದ್ರ ಜಾರಿಗೆ ತಂದಿರುವ 3 ವಿವಾದಿತ ಕೃಷಿ ಮಸೂದೆ ವಾಪಸ್ ಪಡೆಯಲು ಒತ್ತಾಯಿಸಿ ರಾಜ್ಯಪಾಲರ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡಸಿದ್ದು, ಪ್ರತಿಯಾಗಿ ರೈತರು ತಿರುಗಿಬಿದ್ದು, ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮಂಗಳವಾರ ಸೇರಿದ್ದ ಸಾವಿರಾರು ಸಂಖ್ಯೆಯ ರೈತರು ಗಾಂಧಿ ಮೈದಾನ್ ನಿಂದ ದಕ್ ಬಂಗ್ಲೊ ವೃತ್ತದ ಮೂಲಕ ಮೆರವಣಿಗೆ ಆಯೋಜಿಸಿದ್ದರು. ಆದರೆ ಪೊಲೀಸರು ದಕ್ ಬಂಗ್ಲೊ ವೃತ್ತದ ಬಳಿ ಭಾರೀ ಪ್ರಮಾಣದಲ್ಲಿ ಬ್ಯಾರಿಕೇಡ್ ಹಾಕಿ ರೈತರ ಪ್ರತಿಭಟನೆಗೆ ತಡೆಯೊಡ್ಡಿದರು. ಇದರಿಂದ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಾಮಕಿ ನಡೆಯಿತು.

ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಘರ್ಷಣೆಗೆ ತಿರುಗಿದ್ದು, ಪೊಲೀಸರು ರೈತರ ಮೇಲೆ ಲಾಠಿ ಪ್ರಹಾರ ನಡೆಸಿದರು. ಇದರಿಂದ ಕೆರಳಿದ ರೈತರು ತಿರುಗಿಬಿದ್ದು, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರನ್ನೇ ಅಟ್ಟಾಡಿಸಿಕೊಂಡು ಹೋಗಿದ್ದಾರೆ.

ರೈತರು ಭಾರೀ ಸಂಖ್ಯೆಯಲ್ಲಿ ನೆರೆದಿದ್ದರಿಂದ ರಾಜ್ಯಪಾಲರ ಭವನದ ಮುಂದೆ ನುಕುನುಗ್ಗಲು ಆಗಿ ಕಾಲ್ತುಳಿತದಂತ ಅಪಾಯ ಸಂಭವಿಸಬಹುದು ಎಂಬ ಕಾರಣಕ್ಕೆ ಪ್ರತಿಭಟನಾ ಮೆರವಣಿಗೆ ನಿಲ್ಲಿಸಿ ಕೆಲವರು ಮಾತ್ರ ಹೋಗಲು ಹೇಳಿದೆವು. ಆದರೆ ರೈತರು ಒಪ್ಪದೇ ಇದ್ದಿದ್ದರಿಂದ ಪರಿಸ್ಥಿತಿ ಕೈ ಮೀರಿ ಹೋಯಿತು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.SHARE THIS

Author:

0 التعليقات: