ದೇಸಿ ನಿರ್ಮಿತ ಆಕಾಶ್ ಕ್ಷಿಪಣಿ ರಫ್ತು ಮಾಡಲು ಸಂಪುಟ ಅನುಮೋದನೆ
ನವದೆಹಲಿ: ಆತ್ಮ ನಿರ್ಭರ ಭಾರತ್ ಯೋಜನೆ ಅಡಿಯಲ್ಲಿ ದೇಶೀಯ ಆಕಾಶ್ ಕ್ಷಿಪಣಿ ರಫ್ತು ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಇದು 5 ಬಿಲಿಯನ್ ರಕ್ಷಣಾ ರಫ್ತು ಗುರಿಯನ್ನು ಸಾಧಿಸಲು ಮತ್ತು ವಿದೇಶಗಳೊಂದಿಗೆ ಸ್ನೇಹಪರ ಕಾರ್ಯತಂತ್ರದ ಸಂಬಂಧವನ್ನು ಸುಧಾರಿಸಲು ಉದ್ದೇಶಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆತ್ಮ ನಿರ್ಭರ ಭಾರತ್ ಅಡಿಯಲ್ಲಿ, ಭಾರತವು ವಿವಿಧ ರೀತಿಯ ರಕ್ಷಣಾ ವೇದಿಕೆಗಳು ಮತ್ತು ಕ್ಷಿಪಣಿಗಳನ್ನು ತಯಾರಿಸುವ ಸಾಮರ್ಥ್ಯದಲ್ಲಿ ಬೆಳೆಯುತ್ತಿದೆ ಎಂದರು.
0 التعليقات: