ಕತ್ತೆ ಸಗಣಿಯಿಂದ ತಯಾರಾಗುತ್ತೆ ಕಾರದ ಪುಡಿ, ಅರಿಶಿಣ ಪುಡಿ, ದನಿಯಾ ಪುಡಿ! ಸಿಎಂ ಯೋಗಿ ಸಂಘಟನೆಯ ನಾಯಕ ಅರೆಸ್ಟ್!
ಲಖನೌ: ನೀವು ಮನೆಯಲ್ಲಿ ಅಡುಗೆ ಮಾಡಲು ಕಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುರಿ, ಮಸಾಲೆ ಪುಡಿಗಳನ್ನು ಬಳಸುತ್ತೀರಲ್ಲವೇ? ಹಾಗಾದರೆ ಆ ಪುಡಿ ಎಲ್ಲಿ ತಯಾರಾಗುತ್ತದೆ, ಹೇಗೆ ತಯಾರಾಗುತ್ತದೆ ಎನ್ನುವ ವಿಚಾರವನ್ನು ಅವಶ್ಯವಾಗಿ ತಿಳಿದುಕೊಳ್ಳಿ. ಏಕೆಂದರೆ ಕತ್ತೆ ಸಗಣಿ, ಭೂಸಾ, ಆಯಸಿಡ್ ಬಳಸಿ ಈ ಎಲ್ಲ ಮಸಾಲೆ ಪದಾರ್ಥಗಳನ್ನು ತಯಾರಿಸುತ್ತಿದ್ದ ವ್ಯಕ್ತಿಯೊಬ್ಬ ಇದೀಗ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ.
ಉತ್ತರ ಪ್ರದೇಶದ ಹತ್ರಾಸದಲ್ಲಿ ಒಂದು ಮಸಾಲೆ ಪುಡಿಗಳ ಕಾರ್ಖಾನೆಯಿತ್ತು. ಸಿಎಂ ಯೋಗಿ ಆದಿತ್ಯಾನಾಥ ಅವರು 2002ರಲ್ಲಿ ಹಿಂದೂ ಯುವ ವಾಹಿನಿ ಎನ್ನುವ ಸಂಘಟನೆಯೊಂದನ್ನು ಆರಂಭಿಸಿದ್ದರು. ಈ ಸಂಘಟನೆಯ ಮಂಡಲ ಸಹ ಪ್ರಭಾರಿ ಅನೂಪ್ ವರ್ಶ್ನಿ ಈ ಕಾರ್ಖಾನೆಯ ಮಾಲೀಕ. ಆದರೆ ಇತ್ತೀಚೆಗೆ ಈ ಕಾರ್ಖಾನೆಯ ಮೇಲೆ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಸೋಮವಾರ ಕಾರ್ಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ಆ ಸಮಯದಲ್ಲಿ ಕಾರ್ಖಾನೆಯ ನಿಜ ಬಣ್ಣ ಬಯಲಾಗಿದೆ.
ಈ ಕಾರ್ಖಾನೆಯಲ್ಲಿ ಕಾರದ ಪುಡಿ, ಅರಿಶಿಣ ಪುಡಿ, ಕೊತ್ತಂಬುರಿ ಪುಡಿ ಸೇರಿ ಒಟ್ಟು 27 ಮಾದರಿಯ ಮಸಾಲ ಪುಡಿಗಳನ್ನು ತಯಾರಿಸಲಾಗುತ್ತದೆ. ನಿಜವಾದ ಮಸಾಲೆ ಪುಡಿಗೆ, ಕತ್ತೆಯ ಸಗಣಿ, ಭೂಸಾ, ಆಯಸಿಡ್ ಮತ್ತು ಬಣ್ಣಗಳನ್ನು ಬೆರಸಿ ಮಸಾಲೆ ಪದಾರ್ಥಗಳನ್ನು ಮಾಡಲಾಗುತ್ತಿತ್ತು. ಇದೀಗ ಕಾರ್ಖಾನೆಯ ಮೇಲೆ ದಾಳಿ ಮಾಡಿರುವ ಪೊಲೀಸರು 27 ಮಾದರಿಯ ಮಸಾಲೆ ಪುಡಿಗಳನ್ನು ಪರೀಕ್ಷೆಗೆಂದು ಲ್ಯಾಬೋರೇಟರಿಗೆ ಕಳುಹಿಸಿದ್ದಾರೆ. ಅನೂಪ್ರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಖಾಋನೆಯಲ್ಲಿದ್ದ 300ಕೆಜಿಗೂ ಹೆಚ್ಚು ಮಸಾಲೆ ಪದಾರ್ಥವನ್ನು ವಶಕ್ಕೆ ಪಡೆಯಲಾಗಿದೆ. ಲ್ಯಾಬೋರೇಟರಿಯಿಂದ ವರದಿ ಬಂದ ನಂತರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಜಂಟಿ ಮ್ಯಾಜಿಸ್ಟ್ರೇಟ್ ಪ್ರೇಮ್ ಪ್ರಕಾಶ್ ಮೀನಾ ತಿಳಿಸಿದ್ದಾರೆ.
0 التعليقات: