Friday, 18 December 2020

ನಾನು ಬೇಡ ಎಂದು ಹಠ ಹಿಡಿದಿದ್ರೆ ಕುಮಾರಸ್ವಾಮಿ ಸಿಎಂ ಆಗ್ತಿದ್ನಾ?: ಸಿದ್ದರಾಮಯ್ಯ ಪ್ರಶ್ನೆ


ನಾನು ಬೇಡ ಎಂದು ಹಠ ಹಿಡಿದಿದ್ರೆ ಕುಮಾರಸ್ವಾಮಿ ಸಿಎಂ ಆಗ್ತಿದ್ನಾ?: ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ನಾನು ಕುಮಾರಸ್ವಾಮಿ ಬೇಡ ಎಂದು ಹಠ ಹಿಡಿದಿದ್ರೆ ಕುಮಾರಸ್ವಾಮಿ ಸಿಎಂ ಆಗ್ತಿದ್ನಾ..? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ' ನಾನು ಸಮ್ಮಿಶ್ರ ಸರ್ಕಾರ ಬೀಳಿಸಬೇಕು ಅಂತಿದ್ರೆ ಕುಮಾರಸ್ವಾಮಿ ಸಿಎಂ ಆಗೋಕೆ ಬಿಡ್ತಿರಲಿಲ್ಲ, ನಾನು ಕುಮಾರಸ್ವಾಮಿ ಬೇಡ ಎಂದು ಹಠ ಹಿಡಿದಿದ್ರೆ ಕುಮಾರಸ್ವಾಮಿ ಸಿಎಂ ಆಗ್ತಿದ್ನಾ..? ಈತ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಕೂತ್ಕೊಂಡು ಅಧಿಕಾರ ಕಳೆದುಕೊಂಡ ಎಂದು ಏಕವನಚದಲ್ಲಿಯೇ ಹೆಚ್ಡಿಕೆ ವಿರುದ್ಧ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.

ಒಂದು ಕಡೆ ನನಗೆ ಸರ್ಕಾರ ಬೀಳುತ್ತೆ ಅಂತ ಗೊತ್ತಿತ್ತು,ಅದಕ್ಕೆ ಫಾರಿನ್ ಗೆ ಹೋದೆ ಅಂತಾನೆ, ಇನ್ನೊಂದು ಕಡೆ ಸಿದ್ದರಾಮಯ್ಯ ಬೀಳಿಸಿದ ಅಂತಾನೆ..ಇವನಿಗೆ ರಾಜಕೀಯ ಪ್ರಬುದ್ದತೆ ಇದೆಯಾ..? ಎಂಎಲ್ ಎ ಗಳನ್ನು ಸರಿಯಾಗಿ ನಡೆಸಿಕೊಂಡಿದ್ರೆ ಈ ರೀತಿ ಆಗುತ್ತಿರಲಿಲ್ಲ ಎಂದು ಹೆಚ್ಡಿಕೆ ವಿರುದ್ಧ ಸಿದ್ದು ಕಿಡಿಕಾರಿದ್ದಾರೆ.
SHARE THIS

Author:

0 التعليقات: