Wednesday, 16 December 2020

ಪೃಥ್ವಿ ಶಾ ಡಕ್ ಔಟ್; ಕೆಎಲ್ ರಾಹುಲ್‌ಗೆ ಅವಕಾಶ ನೀಡದ್ದಕ್ಕೆ ಆಕ್ರೋಶ


 ಪೃಥ್ವಿ ಶಾ ಡಕ್ ಔಟ್; ಕೆಎಲ್ ರಾಹುಲ್‌ಗೆ ಅವಕಾಶ ನೀಡದ್ದಕ್ಕೆ ಆಕ್ರೋಶ

ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಆರಂಭವಾಗಿರುವ ಮೊದಲ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿರುವ ಭಾರತ ತಂಡದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ನಿರಾಸೆ ಮೂಡಿಸಿದರು.

ಟಾಸ್ ಗೆದ್ದ ಭಾರತ ನಾಯಕ ವಿರಾಟ್ ಕೊಹ್ಲಿ ಹಿಂದು ಮುಂದೆ ನೋಡದೆ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಹುಲ್ಲುಹಾಸಿನ ಪಿಚ್‌ನಲ್ಲಿ ನಾಯಕನ ನಿರ್ಧಾರ ಸರಿಯೆನಿಸಲಿಲ್ಲ.

ಆಸ್ಟ್ರೇಲಿಯಾದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆಗಿರುವ ಪೃಥ್ವಿ ಶಾ, ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

ಕೆಎಲ್ ರಾಹುಲ್ ಸ್ಥಾನಕ್ಕೆ ಪೃಥ್ವಿ ಶಾ ಆಯ್ಕೆ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆಯೇ ಕೇವಲ ಎರಡು ಎಸೆತಗಳನ್ನು ಮಾತ್ರ ಎದುರಿಸಿ ವಿಕೆಟ್ ಒಪ್ಪಿಸಿರುವ ಪೃಥ್ವಿ ಶಾ ಪೆವಿಲಿಯನ್‌ಗೆ ಮರಳಿದರು.

ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಇದೇ ಮೊದಲ ಬಾರಿಗೆ ಹಗಲು-ರಾತ್ರಿ ಪಂದ್ಯವನ್ನಾಡುತ್ತಿದೆ. ಇನ್ನೊಂದೆಡೆ ಕೆಎಲ್ ರಾಹುಲ್ ಹಾಗೂ ಯುವ ಪ್ರತಿಭಾವಂತ ಶುಭಮನ್ ಗಿಲ್‌ಗೆ ಅವಕಾಶ ನೀಡದಿರುವುದು ಟೀಕೆಗೆ ಕಾರಣವಾಗಿದೆ. ಅಭ್ಯಾಸ ಪಂದ್ಯದಲ್ಲೂ ಗಿಲ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು.


SHARE THIS

Author:

0 التعليقات: