Tuesday, 1 December 2020

ಎಸ್ಸೆಸ್ಸೆಫ್ ಟಿ.ಸಿ ರೋಡ್ ಯುನಿಟ್ ಅಸ್ಥಿತ್ವಕ್ಕೆ


 ಎಸ್ಸೆಸ್ಸೆಫ್ ಟಿ.ಸಿ ರೋಡ್ ಯುನಿಟ್ ಅಸ್ಥಿತ್ವಕ್ಕೆ

ಮಂಜನಾಡಿ: ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ನ ಮಂಜನಾಡಿ ಸೆಕ್ಟರ್ ನೂತನ ಶಾಖೆಯಾಗಿ ಎಸ್ಸೆಸ್ಸೆಫ್ ಮಡವೂರು ನಗರ ಟಿ.ಸಿ ರೋಡ್ ಯುನಿಟ್ ಅಸ್ಥಿತ್ವಕ್ಕೆ ತರಲಾಯಿತು.ಎಸ್.ವೈ.ಎಸ್ ನಾಯಕರಾದ ಉಮರ್ ಸಅದಿ ನಡುಪದವು ದುಆ: ನೆರವೇರಿಸಿದರು.ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಸಂಘಟನಾ ತರಗತಿ ನಡೆಸಿದರು.ಟಿ.ಸಿ ರೋಡ್ ಮದ್ರಸ ಅಧ್ಯಕ್ಷ ಟಿ.ಇ ಮಹಮ್ಮದ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಶ್ರಫ್ ಬೀಜಳ್ಳಿ,ನವಾಝ್,ಉಮರ್ ಕುಂಞಿ,ಎಸ್.ಎ ಹಮೀದ್ ಮೊದಲಾದ ನಾಯಕರು ಉಪಸ್ಥಿತರಿದ್ದರು.ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುನೀರ್ ಕಲ್ಮಂಜ ಸ್ವಾಗತಿಸಿದರು,ಝಾಹಿದ್ ಸಾರ್ತಬೈಲ್ ವಂದಿಸಿದರು.


SHARE THIS

Author:

0 التعليقات: