Thursday, 31 December 2020

ರಾಜ್ಯದ ಪಶುಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲಿ ಪಶುಗಳ ಮಾರಣಹೋಮ!


 ರಾಜ್ಯದ ಪಶುಸಂಗೋಪನಾ ಸಚಿವರ ತವರು ಜಿಲ್ಲೆಯಲ್ಲಿ ಪಶುಗಳ ಮಾರಣಹೋಮ!

ಬೀದರ್: ರಾಜ್ಯದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರ ತವರು ಜಿಲ್ಲೆ ಬೀದರ್​ನಲ್ಲಿ ಇಂದು ಬೆಳಗ್ಗೆ 15 ರಿಂದ 20 ಜರ್ಸಿ ಆಕಳುಗಳ ಶವ ಪತ್ತೆಯಾಗಿದ್ದು, ಅನೇಕ ಸಂದೇಹಗಳನ್ನು ಹುಟ್ಟುಹಾಕಿದೆ. ಬೀದರ್ ತಾಲೂಕಿನ ಸಿಂದೋಲ್ ಗ್ರಾಮದ ಸೇತುವೆಯೊಂದರ ಕೆಳಗೆ ಈ ಶವಗಳು ಪತ್ತೆಯಾಗಿವೆ.

ಆಕಳುಗಳಿಗೆ ಬಹುತೇಕ ವಿಷಪ್ರಾಶನ ಮಾಡಿರಬಹುದು. ಅದಿಲ್ಲದೇ ಹೋದರೆ, ನೆರೆ ರಾಜ್ಯಕ್ಕೆ ಗೋವುಗಳನ್ನು ಸಾಗಿಸುವಾಗ ಮೃತಪಟ್ಟ ಗೋವುಗಳನ್ನು ಇಲ್ಲಿ ಎಸೆದು ಹೋಗಿರಬಹುದು. ಅದೂ ಅಲ್ಲದೇ ಹೋದರೆ ತೆಲಂಗಾಣದಿಂದ ದುಷ್ಕರ್ಮಿಗಳು ಈ ಗೋವುಗಳ ಶವವನ್ನು ಇಲ್ಲಿ ತಂದು ಎಸೆದು ಹೋಗಿದ್ದಿರಲೂ ಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಹಳ್ಳದಲ್ಲಿ ಹಸುಗಳ ಶವ ಪತ್ತೆಯಾದ ಕಾರಣ ಆ ನೀರು ಬಳಸುವ ಗ್ರಾಮಸ್ಥರಲ್ಲೂ ಆತಂಕ ಸೃಷ್ಟಿಯಾಗಿದೆ. ರೋಗ ಭೀತಿಯೂ ಹರಡಿದೆ. ಸ್ಥಳಕ್ಕೆ ಮನ್ನಳ್ಳಿ ಪೊಲೀಸರು ಭೇಟಿ ನೀಡಿದ್ದು, ಗೋವುಗಳ ಶವ ವಿಲೇವಾರಿಗೆ ಕ್ರಮ ತೆಗೆದುಕೊಂಡು, ತನಿಖೆ ನಡೆಸಿದ್ದಾರೆ.


SHARE THIS

Author:

0 التعليقات: