Tuesday, 29 December 2020

ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಗೆ ಎಸ್ ಜೀನ್ ಪರೀಕ್ಷೆ ಕಡ್ಡಾಯ


ವಿದೇಶದಿಂದ ಆಗಮಿಸಿದ ಪ್ರಯಾಣಿಕರಿಗೆ ಎಸ್ ಜೀನ್ ಪರೀಕ್ಷೆ ಕಡ್ಡಾಯ

ನವದೆಹಲಿ : ಹೊಸ ಕೊರೋನವೈರಸ್ ಹರಡುವಿಕೆಯನ್ನು ಕುಂಠಿತಗೊಳಿಸುವ ಹಿನ್ನೆಲೆಯಲ್ಲಿ, ಭಾರತಕ್ಕೆ ವಿದೇಶದಿಂದ ಆಗಮಿಸುವವರಿಗೆ ಹಾಗೂ ಈಗಾಗಲೇ ಅಂದರೆ ಡಿಸೆಂಬರ್ 9ರಿಂದ ಡಿ.22ರವಲ್ಲಿ ಒಳಗೆ ಆಗಮಿಸಿದವರಿಗೆ, ಅಲ್ಲದೇ ಕೊರೋನಾ ದೃಢಪಟ್ಟವರಿಗೆ ಎಸ್ ಜೀನ್ ಪರೀಕ್ಷೆ ಕಡ್ಡಾಯ ಎಂಬುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಆದೇಶವನ್ನು ಹೊರಡಿಸಿದೆ.

ಎಸ್ ಜೀನ್ ಪರೀಕ್ಷೆಯ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ವಿದೇಶದಿಂದ ಬರುವ ಎಲ್ಲ ಪ್ರಯಾಣಿಕರಿಗೂ ಎಸ್ ಜೀನ್ ಪರೀಕ್ಷೆ ಕಡ್ಡಾಯವಾಗಿದೆ. ಅದರೊಂದಿಗೆ ಈಗಾಗಲೇ ಭಾರತಕ್ಕೆ ಬಂದವರಿಗೆ ಎಸ್ ಜೀನ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಬ್ರಿಟನ್ ವೈರಸ್ ಪತ್ತೆಗಾಗಿ ಎಸ್ ಜೀನ್ ಪರೀಕ್ಷೆಗೆ ಒಳಪಡುವುದು ಅನಿವಾರ್ಯ ಎಂದು ತಿಳಿಸಿದರು.SHARE THIS

Author:

0 التعليقات: