ಇಂದು ಕರ್ನಾಟಕ ಬಂದ್ : ರಾಜ್ಯದದಲ್ಲಿ ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ
ಬೆಂಗಳೂರು : ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಇಂದು (ಡಿಸೆಂಬರ್ 5) ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಕರ್ನಾಟಕ ರಕ್ಷಣಾ ವೇದಿಕೆ, ರೈತಪರ ಸಂಘಟನೆಗಳು ಹಾಗೂ ಹಲವು ಕನ್ನಡ ಸಂಘಟನೆಗಳ ಬಂದ್ ನಿರ್ಧಾರಕ್ಕೆ ಅನೇಕ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.
ಕರ್ನಾಟಕ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರು ವಿವಿಧ ಸಂಘಟನೆಗಳ ಜೊತೆಗೆ ಮಹತ್ವದ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್ 5 ರ ನಾಳೆ ಕರ್ನಾಟಕ ಬಂದ್ ಮಾಡುವುದು ಖಚಿತ. ಇದನ್ನು ತಡೆಯಲು ಸಾಧ್ಯವಿಲ್ಲ. ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸುತ್ತೇವೆ ಎಂದರು.
ಬಂದ್ ವೇಳೆ ಏನಿರುತ್ತೆ? ಏನಿರಲ್ಲ? ಇಲ್ಲಿದೆ ನೋಡಿ ಮಾಹಿತಿ
ಏನಿರುತ್ತೆ?
ಆಸ್ಪತ್ರೆ, ಔಷಧ ಅಂಗಡಿ, ಆಂಬುಲೆನ್ಸ್ ಸೇವೆ, ಹಾಲು, ತರಕಾರಿ, ದಿನಪತ್ರಿಕೆ, ಕೆಎಸ್ ಆರ್ ಟಿಸಿಮತ್ತು ಬಿಎಂಟಿಸಿ ಬಸ್ ಸಂಚಾರ, ಮೆಟ್ರೋ ಸಂಚಾರ ಇರಲಿದೆ.
ಸರ್ಕಾರಿ ಕಾಲೇಜು, ಖಾಸಗಿ ಕಾಲೇಜು ಇರುತ್ತೆ
ಬಾರ್, ವೈನ್ ಸ್ಪೋರ್ಸ್ ಇರುತ್ತೆ
ಏನಿರಲ್ಲ?
ಓಲಾ, ಉಬರ್ ಸೇವೆ ಇರಲ್ಲ
ಆಟೋ, ಟ್ಯಾಕ್ಸಿ ಸೇವೆ ಇರಲ್ಲ
ಹೋಟೆಲ್, ಅಂಗಡಿಮುಂಗಟ್ಟು ತೆರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಕಳೆದ ಎರಡ್ಮೂರು ವಾರದಿಂದ ರಾಜ್ಯದಲ್ಲಿ ಕಿಚ್ಚು ಹಚ್ಚಿರೋ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಇದೀಗ ಬಂದ್ ಹಂತಕ್ಕೆ ಬಂದು ನಿಂತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಮನವಿಯನ್ನ ಧಿಕ್ಕರಿಸಿ, ಮರಾಠ ನಿಗಮ ವಿರೋಧಿಸಿ ರಾಜ್ಯ ಬಂದ್ಗೆ ಕರೆ ನೀಡಲಾಗಿದೆ.
ಇತ್ತ ಕನ್ನಡ ಪರ ಸಂಘಟನೆಗಳೇನೋ ಬಂದ್ಗೆ ಸಜ್ಜಾಗಿವೆ. ಆದ್ರೆ ಬಂದ್ ಮಾಡುವುದು ಬೇಡ ಅಂತಾ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ. ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ. ಬಂದ್ಗೆ ಎಲ್ಲಿಯೂ ಕೂಡ ಅವಕಾಶ ಇಲ್ಲ ಅಂತ ಖಡಕ್ ಆಗಿಯೇ ವಾರ್ನಿಂಗ್ ನೀಡಿದ್ದಾರೆ.
ಈಗಾಗಲೇ ಕೊರೊನಾ, ಲಾಕ್ಡೌನ್ನಿಂದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದ್ರ ಬೆನ್ನಲ್ಲೇ ಮತ್ತೆ ಬಂದ್ ಅಂದ್ರೆ ಜನ ಏನ್ ಮಾಡಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ. ಹೀಗಾಗಿ ಇಂದಿನ ಬಂದ್ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತೆ ಅನ್ನೋ ಬಗ್ಗೇನೇ ಪ್ರಶ್ನೆ ಮೂಡಿದೆ.
ನಾಳೆ ಏನಿರಲ್ಲ?
ಆಟೋ, ಗಾರ್ಮೆಂಟ್ಸ್, ಕೈಗಾರಿಕೆಗಳು,
ಅಂಗಡಿ ಮುಂಗಟ್ಟು, ಓಲಾ, ಉಬರ್
ನಾಳೆ ಏನಿರುತ್ತೆ?
ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ವೈದ್ಯಕೀಯ ತುರ್ತು ಸೇವೆ
ಮೆಡಿಕಲ್ ಸ್ಟೋರ್, ಪೆಟ್ರೋಲ್ ಬಂಕ್, ಹಾಲು, ಹಣ್ಣು-ತರಕಾರಿ
ರೈಲು ಸೇವೆ, ಮೆಟ್ರೋ, ಬಸ್ ಸಂಚಾರ, ಲಾರಿ ಸಂಚಾರ
ಬಾರ್ & ರೆಸ್ಟೋರೆಂಟ್, ಥಿಯೇಟರ್, ಮಲ್ಟಿಪ್ಲೆಕ್ಸ್, ಮಾಲ್
ಇನ್ನು ಬಂದ್ ವೇಳೆ ಅಹಿತಕರ ಘಟನೆ ನಡೆಯದಂತೆ ರಾಜ್ಯಾದ್ಯಂತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ..
0 التعليقات: