Thursday, 24 December 2020

ಮುಸ್ಲಿಂ ಲೀಗ್ ತಲವಾರು ರಾಜಕೀಯ ಕೊನೆಗೊಳಿಸಬೇಕು: ಕೇರಳ ಮುಸ್ಲಿಂ ಜಮಾಅತ್


 ಮುಸ್ಲಿಂ ಲೀಗ್ ತಲವಾರು ರಾಜಕೀಯ ಕೊನೆಗೊಳಿಸಬೇಕು: ಕೇರಳ ಮುಸ್ಲಿಂ ಜಮಾಅತ್    

ಕೋಝಿಕ್ಕೋಡ್: ಕಾಞಂಗಾಡ್ ಪಝಯ ಕಡಪ್ಪುರಂ ಸ್ವದೇಶಿ ಮತ್ತು ಎಸ್ ವೈ ಎಸ್ ಕಾರ್ಯಕರ್ತನೂ ಆಗಿದ್ದ ಸಿ ಅಬ್ದುರ್ರಹ್ಮಾನ್ ಔಫ್ ಎಂಬ ವ್ಯಕ್ತಿಯನ್ನು ಮುಸ್ಲಿಂ ಲೀಗ್ ಕಾರ್ಯಕರ್ತರು ಕೊಲೆ ಮಾಡಿದ್ದನ್ನು ಕೇರಳ ಮುಸ್ಲಿಂ ಜಮಾಅತ್  ತೀವ್ರವಾಗಿ ಖಂಡಿಸಿತು. ತಮ್ಮ ವಿರುದ್ಧ ಮತ ಚಲಾಯಿಸುವವರನ್ನು ಮತ್ತು ತಮ್ಮ ನಿಲುವಿಗೆ ತಲೆಬಾಗದವರನ್ನು ದೈಹಿಕವಾಗಿ ನಿರ್ನಾಮ ಮಾಡುವಂತಹ ತಲವಾರು ರಾಜಕೀಯವನ್ನು ಮುಸ್ಲಿಂ ಲೀಗ್ ಕೊನೆಗೊಳಿಸಬೇಕು ಮತ್ತು ನಾಯಕರು ಅನುಯಾಯಿಗಳನ್ನು ಸರಿಯಾಗಿ ನಿಯಂತ್ರಿಸಲು ತಯಾರಾಗಬೇಕು ಎಂದು ಕೇರಳ ಮುಸ್ಲಿಂ ಜಮಾಅತ್ ಒತ್ತಾಯಿಸಿತು.

ಸಮಕಾಲೀನ ರಾಜಕೀಯ ಸೋಲನ್ನು ಮುಚ್ಚಿ ಹಾಕಲು ಮುಸ್ಲಿಂ ಲೀಗ್ ಇಂತಹ ಅಮಾನವೀಯ ಹತ್ಯೆಗಳನ್ನು ನಡೆಸುತ್ತಿದೆ. ನಿರಪರಾಧಿಗಳ ರಕ್ತ ಚೆಲ್ಲುವ ಮೂಲಕ ಸಿಗುವ ತಾತ್ಕಾಲಿಕ ರಾಜಕೀಯ ಲಾಭಗಳು ಬಹು ದೊಡ್ಡ ರಾಜಕೀಯ ಪರಿಣಾಮವನ್ನು ಉಂಟುಮಾಡಲಿದೆ ಎಂದು ನಾಯಕತ್ವವನ್ನು ಎಚ್ಚರಿಸಿತು.

ಸುನ್ನಿ ಸಂಘಟನೆಗಳು ಈ ದುರಹಂಕಾರವನ್ನು ಪ್ರಜಾಸತ್ತಾತ್ಮಕವಾಗಿ ಮತ್ತು ಕಾನೂನುಬದ್ಧವಾಗಿ ಎದುರಿಸಲಿದೆ. ಅಬ್ದುರ್ರಹ್ಮಾನ್ ಔಫ್ ಕೊಲೆಗೆ ಕಾರಣಕರ್ತರಾದವರನ್ನು ಮತ್ತು ಅದಕ್ಕೆ ಪ್ರೋತ್ಸಾಹಿಸಿದವರನ್ನು ಆದಷ್ಟು ಬೇಗ ಕಾನೂನಿನ ಮುಂದೆ ತರಲು ಸರ್ಕಾರ ಸಮರ್ಥವಾಗಿ ಕೆಲಸ ಮಾಡಬೇಕು. 

ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ, ಮಾರಾಯಮಂಗಳಂ ಅಬ್ದುರ್ರಹ್ಮಾನ್ ಫೈಝಿ, ವಂಡೂರ್ ಅಬ್ದುರ್ರಹ್ಮಾನ್ ಫೈಝಿ, ಸಿ. ಮುಹಮ್ಮದ್ ಫೈಝಿ, ಎ. ಸೈಫುದ್ಧೀನ್ ಹಾಜಿ, ಪ್ರೊಫೆಸರ್ ಎ.ಕೆ ಅಬ್ದುಲ್ ಹಮೀದ್, ಪ್ರೊಫೆಸರ್ ಯುಸಿ ಅಬ್ದುಲ್ ಮಜೀದ್, ಎನ್.ಅಲಿ ಅಬ್ದುಲ್ಲಾ , ಸಿ.ಪಿ.ಪಿ ಸೈದಲವಿ ಮಾಸ್ಟರ್ ಮುಂತಾದವರು  ಭಾಗವಹಿಸಿದರು.


SHARE THIS

Author:

0 التعليقات: