ರೈತ ನಾಯಕರ ಹಿಂದೆ ಕಾಂಗ್ರೆಸ್ ಅಡಗಿ ಕುಳಿತಿದೆ : ಹೆಚ್ಡಿಕೆ ಸರಣಿ ಟ್ವಿಟ್
ಬೆಂಗಳೂರು, ಡಿ.10- ಕಾಂಗ್ರೆಸ್ಗೆ ಬಿಜೆಪಿ ವಿರುದ್ಧ ಹೋರಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಜೆಡಿಎಸ್ ವಿರುದ್ಧ ತನ್ನ ಹೋರಾಟಗಳನ್ನು ರೂಪಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಕಾಂಗ್ರೆಸ್ ಹಾಗೂ ರೈತ ಮುಖಂಡರ ವಿರುದ್ಧ ಸರಣಿ ಟ್ವಿಟ್ ಮೂಲಕ ವಾಗ್ದಾಳಿ ನಡೆಸಿರುವ ಅವರು, ರೈತ ನಾಯಕರು ಎನಿಸಿಕೊಂಡಿರುವ ಕೆಲವರ ಹಿಂದೆ ಕಾಂಗ್ರೆಸ್ ಈಗ ಅಡಗಿ ಕುಳಿತಿದೆ ಎಂದು ದೂರಿದ್ದಾರೆ. ಅವರ ಮೂಲಕ ರಾಜಕೀಯ ಹೇಳಿಕೆಗಳನ್ನು ಕೊಡಿಸುತ್ತಿದೆ. ಆ ಮೂಲಕ ಕಾಂಗ್ರೆಸ್ ರೈತ ಸಂಘಟನೆಗಳನ್ನು ಹೊಡೆಯುವ ಕೆಲಸಕ್ಕೆ ಕೈ ಹಾಕಿದೆ ಎಂದು ಆಪಾದಿಸಿದ್ದಾರೆ.
0 التعليقات: