Wednesday, 2 December 2020

ನಾಳೆ ಅನ್ನದಾತರ ಜೊತೆ ಕೇಂದ್ರ ಸರ್ಕಾರದಿಂದ ಎರಡನೇ ಮಹತ್ವದ ಸಭೆ


 ನಾಳೆ ಅನ್ನದಾತರ ಜೊತೆ ಕೇಂದ್ರ ಸರ್ಕಾರದಿಂದ ಎರಡನೇ ಮಹತ್ವದ ಸಭೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಮಸೂದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 7 ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನಗಳು ವಿಫಲಗೊಂಡಿದ್ದು, ಈ ಹಿನ್ನೆಲೆ ಡಿ. 3 ಅಂದರೆ ಗುರುವಾರ ಅನ್ನದಾತರ ಜೊತೆ ಕೇಂದ್ರ ಸರ್ಕಾರದಿಂದ 2 ನೇ ಉನ್ನತ ಮಟ್ಟದ ಸಭೆ ನಡೆಸಲಿದೆ.

ನಾಳೆ ಸರ್ಕಾರದ ಜೊತೆ ಮಾತುಕತೆಗೂ ಮುನ್ನ ರೈತ ಸಂಘಟನೆಗಳು ಸಭೆ ಸೇರುವ ಸಾಧ್ಯತೆ ಇದೆ. ಮತ್ತಷ್ಟು ರೈತ ಗುಂಪುಗಳು ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ನಾಳೆ ಸರ್ಕಾರದ ಜೊತೆ ಮಾತುಕತೆ ಹಿನ್ನೆಲೆ ಮಹಾರಾಷ್ಟ್ರದಲ್ಲಿರುವ ವಿವಿಧ ರೈತ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಮೂಲಕ ರೈತರ ಪ್ರತಿಭಟನೆಗೆ ಮಹಾರಾಷ್ಟ್ರದ ಅನ್ನದಾತರು ಸಾಥ್ ನೀಡಲಿದ್ದಾರೆ.

ಇದೆಲ್ಲದರ ನಡುವೆ ಇಂದು ಸಹ ರೈತರ ಸಂಘಟನೆಗಳು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆಯನ್ನು ಮುಂದುವರೆಸಿದ್ದು, ಪ್ರತಿಭಟನಾನಿರತ ರೈತರು ದೆಹಲಿ ಮತ್ತು ಉತ್ತರಪ್ರದೇಶ ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳನ್ನು ಬಂದ್ ಮಾಡಿದ್ದರು. ಗೌತಮ್ ಬುದ್ಧ ದ್ವಾರ ಬಳಿ ರೈತರು ಪ್ರತಿಭಟನೆ ನಡೆಸುತ್ತಿರುವುದರಿಂದ ನೋಯ್ಡಾ-ಲಿಂಕ್ ರಸ್ತೆಯ ಚಿಲ್ಲಾ ಗಡಿಯನ್ನು ಮುಚ್ಚಲಾಗಿತ್ತು.


SHARE THIS

Author:

0 التعليقات: