ದಾರಿ ತೋರಿಸಿದ ನಾಯಕರು ; ಮುಹಿಮ್ಮಾತ್ ಆನ್ಲೈನ್ ಪರೀಕ್ಷೆ ವಿಜೇತರಿಗೆ ಚಿನ್ನದ ಪದಕ ವಿತರಿಸಿ ಅಭಿsನಂದಿಸಿದರು
ಪುತ್ತಿಗೆ; ಮುಹಿಮ್ಮಾತ್ ಕೈಗೊಂಡ ಆನ್ಲೈನ್ ವಿಜ್ಞಾನ ಪರೀಕ್ಷೆಯ ವಿಜೇತರಿಗೆ ಚಿನ್ನದ ಪದಕ ವಿತರಣೆ ಹಾಗೂ ಪೂರ್ಣ ಅಂಕ ಗಳಿಸಿದ ೬೩ ಜ£ರಿಗೆ ಅಭಿನಂದಿಸಲಾಯ್ತು.
ಪ್ರಥಮ ಸ್ಥಾನ ಪಡೆದ ಮಂಜೇಶ್ವರ ತಲಕ್ಕಿಯ ಝುಲೈಖ ಉಮರ್ ರವರಿಗಿರುವ ಚಿನ್ನದ ಪದಕವನ್ನು ಮುಹಿಮ್ಮಾತ್ ಉಪಾಧ್ಯಕ್ಷರಾದ ಸಯ್ಯಿದ್ ಹಸನುಲ್ ಅಹ್ದಲ್ ತಂಙಳರು, ದ್ವಿತಿಯ ಸ್ಧಾನ ಪಡೆದ ಮುಹಮ್ಮದ್ ನವಾಫ್ ರವರಿಗೆ ಮುಹಿಮ್ಮಾತ್ ಪ್ರ.ಕಾರ್ಯದರ್ಶಿ ಬಿ.ಎಸ್ ಅಬ್ದುಲ್ಲಾ ಕುಂಙÂ ಫೈಝಿ ಹಾಗೂ ತೃತೀಯ ಸ್ಥಾನ ಪಡೆದ ಚಙರಕುಳಂ ರಂಷೀಖ್ ಫಾಳಿಲಿಗೆ ಸಯ್ಯಿದ್ ಹಾಮಿದ್
ಅನ್ವರ್ ಅಹ್ದಲ್ ತಂಙಳರು ಚಿನ್ನದ ಪದಕಗಳನ್ನು ವಿತರಿಸಲಾಯ್ತು. ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ೬೩ ಮಂದಿಗಿರುವ ಪೋತ್ಸಾಹಕ ಬಹುಮಾನ ವಿತರಣಗೆ ಪ್ರ. ವ್ಯವಸ್ಥಾಪಕ ಉಮರ್ ಸಖಾಫಿ ಕರ್ನೂರ್ ಚಾಲ್ತಿನೀಡಿದರು. ಪಿ.ಆರ್ ಸೆಕ್ರಟರಿ ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್, ವೈ.ಎಂ ಅಬ್ದರ್ರಹ್ಮಾನ್ ಅಹ್ಸನಿ, ಮೂಸ ಸಖಾಫಿ ಕಳತ್ತೂರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಮಸ್ತ ಕೇರಳ ಜಂಇಯತುಲ್ ಉಲಮ ಸಾರಥಿಗಳಾಗಿದ್ದ ತಾಜುಲ್ ಉಲಮ ಸಯ್ಯಿದ್ ಅಬ್ದರ್ರಹ್ಮಾನ್ ಅಲ್-ಬುಖಾರಿ ಉಳ್ಳಾಳ ತಂಙಳರ ಹಾಗೂ ನೂರುಲ್ ಉಲಮ ಎಂ.ಎ ಅಬ್ದುಲ್ ಖಾದಿರ್ ಮುಸ್ಲಿಯಾರ್ ರವರ ಅನುಸ್ಮರಣೆಯ ಭಾಗವಾಗಿ "ದಾರಿ ತೋರಿಸಿದ ನಾಯಕರು" ಎಂಬ ವಿಷಯದಲ್ಲಿ ರಹ್ಮತುಲ್ಲಾ ಸಖಾಫಿ ಎಳಮರಂ ಉಸ್ತಾದ್ ಮಾಡಿದ ಭಾಷಣೆ ಆಧರಿತ ಪರೀಕ್ಷೆ ನಡೆಯಿತು.
ವಿವಿಧ ವಿದೇಶಿ ರಾಷ್ಟಗಳಿಂದ ಹಾಗೂ ರಾಷ್ಟದ ವಿವಿಧ ಭಾಗಗಳಿಂದಲೂ ಸ್ಪರ್ಧಾರ್ಥಿಗಳಿದ್ದರು.ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ 68 ಮಂದಿಯಿ0ದ ಚೀಟಿ ಎತ್ತುವ ಮೂಲಕ ಮೊದಲ ಮೂರು ವಿಜೇತರನ್ನು ಆಯ್ಕೆ ಮಾಡಲಾಯ್ತು. ರಹ್ಮತುಲ್ಲಾ ಸಖಾಫಿಯ ಪ್ರಭಾಷಣ ಇದರಿಂದ ಹಲವಾರು ಜನರಿಗೆ ತಲುಪಿತು.
0 التعليقات: