ಜನವರಿಯಿಂದ ಅಯೋಧ್ಯೆಯಲ್ಲಿ ದೇವಾಲಯ ಕಟ್ಟಡ ನಿರ್ಮಾಣ ಕಾರ್ಯ ಆರಂಭ
ಅಯೋಧ್ಯೆ ರಾಮ ದೇವಾಲಯದ ಅಡಿಪಾಯ ಕಾರ್ಯವು ಜನವರಿಯಿಂದ ಆರಂಭವಾಗಲಿದೆ ಅಂತಾ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯ ಮಾಹಿತಿ ನೀಡಿದ್ದಾರೆ.
ಸರಯು ನದಿ ನೀರಿನ ಹರಿವಿನಿಂದಾಗಿ ದೇವಾಲಯದ ಅಡಿಪಾಯಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುವ ಸಲುವಾಗಿ ಅಡಿಪಾಯದ ಕೆಳಗೆ ತಡೆಗೋಡೆ ನಿರ್ಮಿಸಲಾಗಿದೆ ಅಂತಾ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಈಗಾಗಲೇ ದೇವಸ್ಥಾನದ ನಿರ್ಮಾಣದ ಬಗ್ಗೆ ವಿವಿಧ ಇಂಜಿನಿಯರ್ಗಳು ವರದಿ ಸಿದ್ಧಪಡಿಸುತ್ತಿದ್ದು ಜನವರಿ ತಿಂಗಳಿನಿಂದ ದೇಗುಲ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.
ಶ್ರೀರಾಮಜನ್ಮಭೂಮಿ ಟ್ರಸ್ಟ್ ಬುಧವಾರ ವಿಶ್ವ ಹಿಂದೂ ಪರಿಷತ್ ನಾಯಕರೊಂದಿಗೆ ಸಭೆ ನಡೆಸಿ ದೇವಾಲಯ ನಿರ್ಮಾಣ ವಿಚಾರವಾಗಿ ಚರ್ಚೆ ನಡೆಸಿದೆ.
0 التعليقات: