Tuesday, 29 December 2020

ವಿವಾದಕ್ಕೆ ಕಾರಣವಾಗಿದೆ ಕರೋನ ಸಮಯದಲ್ಲಿ ಬ್ರೆಜಿಲ್‌ ಫುಟ್ಬಾಲ್‌ ತಾರೆ ನೆಮಾರ್ ಡಾ ಸಿಲ್ವಾ ಮಾಡಿರುವ ಈ ಕೆಲಸ.!


 ವಿವಾದಕ್ಕೆ ಕಾರಣವಾಗಿದೆ ಕರೋನ ಸಮಯದಲ್ಲಿ ಬ್ರೆಜಿಲ್‌ ಫುಟ್ಬಾಲ್‌ ತಾರೆ ನೆಮಾರ್ ಡಾ ಸಿಲ್ವಾ ಮಾಡಿರುವ ಈ ಕೆಲಸ.!

ಡಿಜಿಟಲ್‌ಡೆಸ್ಕ್‌: ಬ್ರೇಜಿಲ್‌ನಲ್ಲಿ ಕೋವಿಡ್ -19 ಸೋಂಕುಗಳು ಮತ್ತು ಸಾವುಗಳ ಏರಿಕೆಯನ್ನು ಲೆಕ್ಕಿಸದೆ ತನ್ನ ಹಲವಾರು ಸೂಪರ್ಸ್ಟಾರ್ ಸ್ನೇಹಿತರಿಗಾಗಿ ಹೊಸ ವರ್ಷಕ್ಕೆ ಒಂದು ವಾರ ಇರುವ ಮುನ್ನವೇ ಪಾರ್ಟಿಯನ್ನು ನಡೆಸಿದದ್ದಾರೆ ಎನ್ನಲಾಗಿದೆ. ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮಾರ್ ಅವರು ಮಾಡಿರುವ ಈ ಪಾರ್ಟಿಯನ್ನು ಕೊರೊನಾವೈರಸ್ ಸಂತ್ರಸ್ತರ ಸಮಾಧಿಯ ಮೇಲೆ ನೃತ್ಯ ಮಾಡಿದ್ದಾರೆ ಎಂದು ದೇಶದ ಜನತೆ ಕಿಡಿಕಾರುತ್ತಿದ್ದಾರೆ.

ರಿಯೊ ಡಿ ಜನೈರೊ ರಾಜ್ಯದ ಕಡಲತೀರದ ನಗರವಾದ ಮಂಗರತಿಬಾದ ಕಡಲ ಮುಂಭಾಗದ ಭವನದಲ್ಲಿ ಶನಿವಾರ 'ನೇಮಾರ್‌ಪಲೂಜಾ' ಉತ್ಸವಗಳು ನಡೆದಿದ್ದಾವೆ ಎಂದು ಬ್ರೆಜಿಲ್ ಮಾಧ್ಯಮ ವರದಿಗಳು ತಿಳಿಸಿವೆ. ಇದೇ ವೇಳೆ ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮಾರ್ ಅವರು ಈ ಪಾರ್ಟಿಯಲ್ಲಿ ತಮ್ಮ ಸ್ನೇಹಿತರ ಜೊತೆಗೆ ಕಾಣಿಸಿಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಇದೇ ವೇಳೆ ಈ ಪಾರ್ಟಿಯಲ್ಲಿ ಸುಮಾರು 150 ಅತಿಥಿಗಳನ್ನು ಭಾಗವಹಿಸಿದ್ದರು ಎನ್ನಲಾಗಿದೆ. ಕರೋನದಿಂದ ಬ್ರೆಜಿಲ್‌ ಹಿಂಡಿ ಹಿಪ್ಪೆಕಾಯಿಯಾಗಿದ್ದು, ಈ ಹೊತ್ತಿನಲ್ಲಿ ಇಂತಹ ಪಾರ್ಟಿ ನಡೆಯುವುದು ಸರಿನಾ ಅಂತ ಪ್ರಶ್ನೆ ಮಾಡುತ್ತಿದ್ದಾರೆ.


SHARE THIS

Author:

0 التعليقات: