Tuesday, 15 December 2020

ಎಸ್ಸೆಸ್ಸೆಫ್ ಈದ್ಗಾ ಯುನಿಟ್ ಕೃಷ್ಣಾಪುರ ನವ ಸಾರಥಿಗಳ ಆಯ್ಕೆ


 ಎಸ್ಸೆಸ್ಸೆಫ್ ಈದ್ಗಾ ಯುನಿಟ್ ಕೃಷ್ಣಾಪುರ ನವ ಸಾರಥಿಗಳ ಆಯ್ಕೆ 

ಎಸ್ಸೆಸ್ಸೆಫ್ ಈದ್ಗಾ ಯುನಿಟ್ ಕೃಷ್ಣಾಪುರ ಇದರ ವಾರದ ನಾರಿಯತ್ ಸ್ವಲಾತ್ ಮಜ್ಲಿಸ್ ಹಾಗೂ ವಾರ್ಷಿಕ ಮಹಾಸಭೆ ಹಬೀಬುರಹ್ಮಾನ್ ಸಖಾಫಿ ಈದ್ಗಾ ರವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ  ಇಬ್ರಾಹಿಂ ಖಲೀಲ್ ಅಧ್ಯಕ್ಷತೆ ವಹಿಸಿದರು.

ಸಭೆಯಲ್ಲಿ ಎ.ಕೆ ಮುಸ್ತಫ ಹಿಮಮಿ ಸ್ವಾಗತಿಸಿದರು ಮತ್ತು  ಹಸನ್ ಸಖಾಫಿ ಈದ್ಗಾ ಉದ್ಘಾಟಿಸಿದರು. 

ಕೃಷ್ಣಾಪುರ ಸೆಕ್ಟರ್ ಇದರ ಅಧ್ಯಕ್ಷರಾದ ಹರ್ಷದ್ ಸಖಾಫಿ , ಕೃಷ್ಣಾಪುರ ಸೆಕ್ಟರ್ ಕೋಶಾಧಿಕಾರಿ ಮಝಾರ್, ಜಂಕ್ಷನ್ ಯೂನಿಟ್ ಇದರ ಪ್ರ. ಕಾರ್ಯದರ್ಶಿ ರವೂಫ್   ವೀಕ್ಷಕರಾಗಿ ಆಗಮಿಸಿದರು.

ಗಣ್ಯ ಅತಿಥಿಗಳಾಗಿ ಅಶ್ರಫ್ ಸಖಾಫಿ ಬದ್ರುಲ್ ಹುದಾ, ರಝಾಕ್ ಸಖಾಫಿ ಈದ್ಗಾ, SYS ಈದ್ಗಾ ಬ್ರಾಂಚ್ ಅಧ್ಯಕ್ಷರಾದ ಲುಕ್ಮಾನಿಯ  ಉಸ್ತಾದ್, SYS ಈದ್ಗಾ ಬ್ರಾಂಚ್ ಕಾರ್ಯದರ್ಶಿ  ಇಸ್ಮಾಯಿಲ್ BASF, SYS  ಹಾಗೂ ಸಿರಾಜುಲ್ ಹುದಾ ನಾಯಕರಾದ  ಮಯ್ಯದ್ದಿ B. H. B, ಆಸ್ಕರ್ ಅಲಿ  ಉಪಸ್ಥಿತರಿದ್ದರು.

SSF ಈದ್ಗಾ  ಶಾಖೆಯ ನೂತನ ಸಾರಥಿಗಳ ಆಯ್ಕೆ 

ನೂತನ ಅಧ್ಯಕ್ಷರಾಗಿ : ನೌಫಲ್  ಷಾ.  ಉಪಾಧ್ಯಕ್ಷ: ಇರ್ಫಾನ್ ಮತ್ತು ಇಬ್ರಾಹಿಂ ಖಲೀಲ್.  ಪ್ರ.ಕಾರ್ಯದರ್ಶಿ: ಜುನೈದ್. ಕಾರ್ಯದರ್ಶಿಗಳಾಗಿ: ಝಿಯಾದ್, ಕಬೀರ್, ಸೈಫುದ್ದೀನ್, ಮುನಾಝ್,ಸುಹೈಲ್ ಮತ್ತು ಅಂಫಾಲ್.  ಕೋಶಾಧಿಕಾರಿ: ಸಫ್ವಾನ್  ರವರನ್ನು ಆಯ್ಕೆ ಮಾಡಲಾಯಿತು.

ಮರಣ ಹೊಂದಿದ SYS ನಾಯಕರಾದ ಮಾರ್ಹೂಂ ಹುಸೈನಕ  ಹಾಗೂ ಇನ್ನಿತರರ ಹೆಸರಲ್ಲಿ ತಹ್ಲಿಲ್ ಹದಿಯ ಮಾಡಲಾಯಿತು. ಕೊನೆಗೆ ನೂತನ ಕಾರ್ಯದರ್ಶಿ  ಜುನೈದ್ ರವರು ಧನ್ಯವಾದ ಹೇಳಿದರು.

SHARE THIS

Author:

0 التعليقات: