ಹಾಪ್ಕಾಮ್ಸ್ನಿಂದ ಮನೆ ಬಾಗಿಲಿಗೆ ಹಣ್ಣು ಮತ್ತು ತರಕಾರಿ
ಮೈಸೂರು : ತೋಟಗಾರಿಕೆ ಇಲಾಖೆ ಅಂಗಸಂಸ್ಥೆಯಾದ ಜಿಲ್ಲಾ ಹಾಪ್ಕಾಮ್ಸ್ ನಗರ ವ್ಯಾಪ್ತಿಯ ಬಡಾವಣೆಗಳ ನಿವಾಸಿಗಳಿಗೆ ಆನ್ಲೈನ್ ಮೂಲಕ ರೈತರಿಂದ ಖರೀದಿಸಿದ ಹಣ್ಣು ತರಕಾರಿಗಳನ್ನು ನಗರದ ನಿವಾಸಿಗಳ ಮನೆಬಾಗಿಲಿಗೆ ಹಾಗೂ ಶುಭ ಸಮಾರಂಭ ನಡೆಯುವ ಸ್ಥಳಗಳಿಗೆ ನಿಗಧಿತ ದರ ಹಾಗೂ ನಿಖರವಾದ ತೂಕದಲ್ಲಿ ಸರಬರಾಜು ಮಾಡಲಾಗುತ್ತದೆ.
ಆನ್ಲೈನ್ನಿಂದ ಗ್ರಾಹಕರು ಹೆಸರನ್ನು ನೊಂದಾಯಿಸಿಕೊಂಡು ಈ ಸೇವೆಯನ್ನು ಪಡೆದುಕೊಳ್ಳಬಹುದು. ಈ ಸೇವೆಯನ್ನು ಪಡೆಯಲು ಸಾರ್ವಜನಿಕರು ಮುಂಗಡವಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಇದಕ್ಕಾಗಿ Hopcoms online ಆಯಪ್ ಮೂಲಕ ಸಾರ್ವಜನಿಕರು ಹೆಸರನ್ನು ಪಡೆದುಕೊಂಡು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು.
0 التعليقات: