Monday, 14 December 2020

ಸೀರಿಯಲ್ ನಟಿ ಚೈತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಚೈತ್ರಾ ಪತಿ ಬಂಧನ


ಸೀರಿಯಲ್ ನಟಿ ಚೈತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಚೈತ್ರಾ ಪತಿ ಬಂಧನ

ಚೆನ್ನೈ: ತಮಿಳುನಾಡಿನ ಸೀರಿಯಲ್ ನಟಿ ಚೈತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಚೈತ್ರಾ ಪತಿಯನ್ನು ಬಂಧಿಸಲಾಗಿದೆ.

ಚೈತ್ರಾ ಪತಿ ಹೇಮಂತ್ ರನ್ನು ಬಂಧಿಸಲಾಗಿದೆ. ಮಗಳಿಗೆ ಅಳಿಯ ಹೊಡೆಯುತ್ತಿದ್ದ, ಇದೇ ಕಾರಣಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಚೈತ್ರಾ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

29 ವರ್ಷ ಪ್ರಾಯದ ನಟಿ ಚೈತ್ರಾ ಡಿ.10ರಂದು ಚೆನ್ನೈ ಹೊರವಲಯದಲ್ಲಿರುವ ಹೋಟೆಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

ನಟಿಯ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟ ಕಾರಣ ಎಂದು ಪೊಲೀಸರು ಪ್ರಾಥಮಿಕ ವರದಿಯಲ್ಲಿ ಹೇಳಿದ್ದರೂ, ಇದೀಗ ಚೈತ್ರಾ ಪತಿ ಹೇಮಂತ್ ಬಂಧನದ ಬಳಿಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಗುವ ಸಾಧ್ಯತೆಯಿದೆ.

ಚೈತ್ರಾ ಮತ್ತು ಹೇಮಂತ್ ಕೆಲ ತಿಂಗಳ ಹಿಂದೆ ವಿವಾಹವಾಗಿದ್ದರು. ಚೈತ್ರಾ ಅವರು ಸೀರಿಯಲ್ ನಲ್ಲಿ ಕೆಲವು ದೃಶ್ಯಗಳಲ್ಲಿ ನಟಿಸಿದ್ದು ಹೇಮಂತ್ ಗೆ ಇಷ್ಟವಾಗಿರಲಿಲ್ಲ. ಅಸಮಾಧಾನಗೊಂಡಿದ್ದ ಹೇಮಂತ್ ಚೈತ್ರಾಗೆ ದೈಹಿಕ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

ಕೆಲವು ದಿನಗಳ ವಿಚಾರಣೆ ಬಳಿಕ ಪೊಲೀಸರು ಹೇಮಂತ್ ರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾರ ಸ್ನೇಹಿತರು ಮತ್ತು ಸಹೋದ್ಯೋಗಿಗಳ ವಿಚಾರಣೆಯನ್ನೂ ನಡೆಸಲಾಗುತ್ತಿದೆ.



SHARE THIS

Author:

0 التعليقات: