Monday, 14 December 2020

ರಾಜ್ಯ ಸರ್ಕಾರದಿಂದ ಬಳ್ಳಾರಿ ಜಿಲ್ಲೆ ವಿಭಜನೆಗೆ ಅಧಿಸೂಚನೆ


ರಾಜ್ಯ ಸರ್ಕಾರದಿಂದ ಬಳ್ಳಾರಿ ಜಿಲ್ಲೆ ವಿಭಜನೆಗೆ ಅಧಿಸೂಚನೆ

ಬೆಂಗಳೂರು : ನೂತನ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದ ರಾಜ್ಯ ಸರ್ಕಾರ ಈ ಸಂಬಂಧ ಸೋಮವಾರ ಅಧಿಸೂಚನೆ ಹೊರಡಿಸಿದ್ದು, ಈ ಮೂಲಕ ವಿಜಯನಗರ ಜಿಲ್ಲೆ ರಚನೆ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ದೊರೆತಂತಾಗಿದೆ.

ಹೊಸಪೇಟೆಯನ್ನು ವಿಜಯನಗರದ ಕೇಂದ್ರ ಸ್ಥಾನವನ್ನಾಗಿ ಮಾಡಲು ಉದ್ದೇಶಿಸಲಾಗಿದ್ದು, ವಿಜಯನಗರ ಜಿಲ್ಲೆಗೆ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ತಾಲೂಕುಗಳನ್ನು ಸೇರ್ಪಡೆಗೊಳಿಸಲು ಉದ್ದೇಶಿಸಿದೆ.

ಇನ್ನು ಈ ಸಂಬಂಧ ರಾಜ್ಯ ಸರ್ಕಾರ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಯಾವುದೆ ವ್ಯಕ್ತಿಗಳಿಂದ ಆಕ್ಷೇಪಣೆ ಇದ್ದರೆ ರಾಜ್ಯಪತ್ರ ಪ್ರಕಟಗೊಂಡ ದಿನದಿಂದ 1 ತಿಂಗಳೊಳಗೆ ಸಲ್ಲಿಸಲು ಅವಕಾಶ ನೀಡಿದೆ.





SHARE THIS

Author:

0 التعليقات: