ಯುವಕನೊಂದಿಗೆ ಹೊಂಡಕ್ಕೆ ಜಿಗಿದ ಹೋರಿ ಅಭಿಮಾನಿಗಳ ಎದುರಲ್ಲೇ ಪ್ರಾಣಬಿಟ್ಟಿತು.
ಹಿರೇಕೆರೂರು: ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿಯೊಂದು ರಸ್ತೆ ಪಕ್ಕದ ಹೊಂಡಕ್ಕೆ ಜಿಗಿದು ಮೃತಪಟ್ಟಿದೆ.
ನಿಷೇಧದ ನಡುವೆಯೂ ಹಾವೇರಿ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳು ರಾಜಾರೋಷವಾಗಿ ನಡೆಯುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸ್ಪರ್ಧೆಯ ವೇಳೆ ಬೆದರಿದ ಹೋರಿ ಹಗ್ಗ ಹಿಡಿದ ಯುವಕನ ಸಮೇತ ಪಕ್ಕದಲ್ಲಿನ ಹೊಂಡಕ್ಕೆ ಜಿಗಿಯಿತು. ಯುವಕ ನೀರಲ್ಲಿ ಈಜಿ ಅಪಾಯದಿಂದ ಪಾರಾದ. ಆದರೆ ಹೋರಿ ಇನ್ನೊಂದು ದಡಕ್ಕೆ ಈಜುತ್ತ ಹೋಗಲು ಯತ್ನಿಸಿತ್ತಾದರೂ ಅದಕ್ಕೆ ಕಟ್ಟಿದ ಹಗ್ಗ ಕಾಲಿಗೆ ಸಿಲುಕಿ ಈಜಲಾಗದೆ ಹೊಂಡದಲ್ಲೇ ಪ್ರಾಣಬಿಟ್ಟಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ದುರ್ಘಟನೆಯಲ್ಲಿ ಮೃತಪಟ್ಟ ಹೋರಿ ಹೆಸರು ವರದಾನಾಯಕ. ಹೋರಿ ಹಬ್ಬದ ಅಭಿಮಾನಿಗಳ ಎದುರೇ ವರದಾನಾಯಕ ಹೋರಿ ದುರ್ಮರಣಕ್ಕೀಡಾಗಿದೆ. ಸುಮಾರು ಎರಡು ಲಕ್ಷ ಮೌಲ್ಯದ ಕೊಬ್ಬರಿ ಹೋರಿಯನ್ನು ಕಳೆದುಕೊಂಡ ಮಾಲೀಕ ಸ್ಥಳದಲ್ಲೇ ಕಣ್ಣೀರು ಹಾಕಿದರು.
0 التعليقات: