Wednesday, 2 December 2020

ಅಮೆರಿಕ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾರತದ ಕಂಪು! ಕಾರ್ಯಕ್ರಮ ನಿಯೋಜಿಸುತ್ತಿರುವುದು ಯಾರು ಗೊತ್ತಾ?


 ಅಮೆರಿಕ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾರತದ ಕಂಪು! ಕಾರ್ಯಕ್ರಮ ನಿಯೋಜಿಸುತ್ತಿರುವುದು ಯಾರು ಗೊತ್ತಾ?

ವಾಷಿಂಗ್ಟನ್​: ಅಮೆರಿಕದ ಇತಿಹಾಸದಲ್ಲಿ ಮೊದಲನೇ ಬಾರಿಗೆ ಭಾರತ ಮೂಲದ ಮಹಿಳೆಯೊಬ್ಬರು ಉಪಾಧ್ಯಕ್ಷ ಸ್ಥಾನಕ್ಕೆ ಏರಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಜೋ ಬೈಡೆನ್​ ಮತ್ತು ಕಮಲಾ ಹ್ಯಾರಿಸ್​ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾರತದ ಕಂಪು ಕಾಣಿಸಿಕೊಳ್ಳುತ್ತಿದೆ.

2021ರ ಜನವರಿಯಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿರುವವರು ಭಾರತ ಮೂಲದ ಮಜು ವರ್ಗೀಸ್​ ಅವರು. ಅವರ ತಾಯಿ ಭಾರತದ ಕೇರಳದಲ್ಲಿ ನರ್ಸ್​ ಆಗಿ ಕೆಲಸ ಮಾಡಿದ್ದವರು. ತಂದೆ ನ್ಯೂಯಾರ್ಕ್​ನಲ್ಲಿ ಕ್ಯಾಬ್​ ಡ್ರೈವರ್​ ಆಗಿದ್ದವರು. ಮಜು ಅವರು ವೃತ್ತಿಯಲ್ಲಿ ವಕೀಲರಾಗಿದ್ದು, ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ ಬೈಡೆನ್​ ಮತ್ತು ಕಮಲಾ ಅವರ ಪರವಾಗಿ ಕೆಲಸ ಮಾಡಿದ್ದರು. ಸಾಕಷ್ಟು ಜನ ಸ್ವಯಂಸೇವಕರನ್ನು ಒಗ್ಗೂಟಿಸಿ, ಅವರ ಗೆಲುವಿಗೆ ಕಾರಣರಾಗಿದ್ದಾರೆ. ಇದೀಗ ಅವರನ್ನು ಗುರುತಿಸಿರುವ ಅಧ್ಯಕ್ಷರು, ಅವರಿಗೆ ಅಧ್ಯಕ್ಷೀಯ ಉದ್ಘಾಟನಾ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕರ ಸ್ಥಾನವನ್ನು ಕೊಟ್ಟಿದ್ದಾರೆ.


SHARE THIS

Author:

0 التعليقات: