ನಳಿನ್ ಕುಮಾರ್ ಕಟೀಲ್ ಕಚೇರಿ ಮೇಲೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ ಪ್ರಕರಣ; ವಿವಾದಾತ್ಮಕ ಹೇಳಿಕೆ ನೀಡಿದ ಸಟಿ ರವಿ
ಚಿಕ್ಕಮಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಚೇರಿ ಮೇಲೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ ವಿಚಾರ ಸಂಬಂಧ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, "ಪಿಎಫ್ಐ ನವರು ಬಾಲ ಬಿಚ್ಚಿ ಮೆರೆಯುವ ಕಾಲ ಈಗಿಲ್ಲ. ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್ ಮಾಡಬೇಕಾಗುತ್ತದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಿಎಎ ವಿರುದ್ಧದ ಪ್ರತಿಭಟನೆಗೆ ನೂರಾರು ಕೋಟಿ ರೂ ಅಕ್ರಮ ಹಣ ದೇಶವಿದೇಶದಿಂದ ಬಂದ ಮಾಹಿತಿ ಇದೆ, ಅದರ ಬಗ್ಗೆ ಇಡಿ ತನಿಖೆ ಮಾಡಿದರೆ, ಇಡಿ ತನಿಖೆ ಮಾಡಬೇಡ ಎನ್ನಲೂ ಪಿಎಫ್ಐ ಯಾರು. ಅಷ್ಟೇ ಅಲ್ಲದೆ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವಂತೆ ಇವರೇಕೆ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಭಾರತದೇಶ ಇರುವುದು ಭಯೋತ್ಪಾದನೆ ಅಥವಾ ಅರಾಜಕತೆ ಮಾಡುವುದಕ್ಕಾಗಿ ಅಲ್ಲ. ಈ ಪ್ರಕರಣದ ಬಗ್ಗೆ ಕೂಲಂಕುಶ ತನಿಖೆಯಾಗಬೇಕು. ನಂತರ ಸತ್ಯ ಬಹಿರಂಗವಾದ ಮೇಲೆ ಇವರೆಲ್ಲರ ಹೆಡೆಮುರಿ ಕಟ್ಟುತ್ತೇವೆ ಎಂದು ಸಿಟಿ ರವಿ ಹೇಳಿದರು.
0 التعليقات: