Wednesday, 2 December 2020

ಬುರೆವಿ ಚಂಡಮಾರುತ ಎಫೆಕ್ಟ್ : ಇಂದು ಕೇರಳದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ


 ಬುರೆವಿ ಚಂಡಮಾರುತ ಎಫೆಕ್ಟ್ : ಇಂದು ಕೇರಳದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ

ತಿರುವನಂತಪುರಂ: ಬುರೆವಿ ಚಂಡಮಾರುತವು ಇಂದು ಬೆಳಗ್ಗೆ ಮನ್ನಾರ್ ಕೊಲ್ಲಿ ಮತ್ತು ಪಕ್ಕದ ಕೊಮೊರಿನ್ ಪ್ರದೇಶದಲ್ಲಿ ಆರ್ಭಟಿಸಲಿದೆ. ಕಳೆದ ಆರು ಗಂಟೆಗಳಲ್ಲಿ 12 ಕಿ.ಮೀ ವೇಗದಲ್ಲಿ ಶ್ರೀಲಂಕಾದಿಂದ ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಂಡಮಾರುತ ಸಾಗುತ್ತಿದೆ ಎಂದು ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

ಬುರೆವಿ ಚಂಡಮಾರುತದ ಹಿನ್ನೆಲೆಯಲ್ಲಿ ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ತೀವ್ರ ಮಳೆಯಾಗುವ ನಿರೀಕ್ಷೆಯಿದ್ದು, ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಈಗಾಗಲೇ ಎನ್‌ಡಿಆರ್‌ಎಫ್​ನ ಎಂಟು ತಂಡಗಳು ಮತ್ತು ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದಾರೆ.


SHARE THIS

Author:

0 التعليقات: