Thursday, 17 December 2020

ಥೇಟ್ ಮುಖದಂತೆ ಇರುವ ಮಾಸ್ಕ್ ರೆಡಿ.!


 ಥೇಟ್ ಮುಖದಂತೆ ಇರುವ ಮಾಸ್ಕ್ ರೆಡಿ.!

ಟೊಕಿಯೋ: ಕೊರೊನಾ ಕಾರಣದಿಂದ‌ ಜಗತ್ತಿನ ಜನರೆಲ್ಲ ಮುಖವಾಡ ಹಾಕಿ ತಿರುಗುವಂತಾಗಿದೆ. ಈ ಸಂದರ್ಭದಲ್ಲಿ ಜಪಾನ್ ಕಂಪನಿಯೊಂದು ವ್ಯಕ್ತಿಯ ಮುಖವನ್ನು ನಿಖರವಾಗಿ ಹೋಲುವ ಮುಖವಾಡ ಸಿದ್ಧಮಾಡಿದೆ. ಇನ್ನೊಬ್ಬ ವ್ಯಕ್ತಿಯ ಮುಖವಾಡ ಹಾಕಿ ಓಡಾಡುವುದನ್ನು ಸಿನೆಮಾಗಳಲ್ಲಿ ನೋಡಿದ್ದೆವು. ಈಗ ನಿಜವಾಗಿಯೂ ಬಂದಿದೆ.

ಶುಹಿ ಒಕ್ವಾರಾ ಎಂಬುವವರು ತ್ರಿಡಿ ತಂತ್ರಜ್ಞಾನ ಬಳಸಿ ತಯಾರಿಸಿದ ಮುಖವಾಡ ಕೊರೊನಾ ವೈರಸ್ ನಿಂದ ರಕ್ಷಣೆ ನೀಡುವುದಿಲ್ಲ. ಆದರೆ, ಜನರನ್ನು ಅಚ್ಚರಿಗೊಳಿಸುತ್ತದೆ. ಟೊಕಿಯೊದ ಕೊಮೆನ್ಯಾ ಒಮೊಟೆ ಎಂಬಲ್ಲಿರುವ ತಮ್ಮ ಅಂಗಡಿಯಲ್ಲಿ ಕೆಲವೇ ತಿಂಗಳ ನಂತರ ಈ ಮುಖವಾಡವನ್ನು ಮಾರಾಟ ಮಾಡುವ ಸಿದ್ಧತೆಯಲ್ಲಿ ಶುಹಿ ಒಕ್ವಾರಾ ಇದ್ದಾರೆ.

ಮುಖವಾಡವನ್ನು ತಲಾ 98 ಸಾವಿರ ಯೆನ್ (69,832 ರೂ.)ಗೆ ಮಾರಾಟ ಮಾಡಲು ಶುಹಿ ಒಕ್ವಾರಾ ನಿರ್ಧರಿಸಿದ್ದಾರೆ. ತಲಾ 40 ಸಾವಿರ ಯೆನ್ (28,514 ರೂ.)ನೀಡಿ ನೂರಕ್ಕೂ ಅಧಿಕ ಜನ ಮುಖವಾಡ ಪಡೆಯಲು ತಮ್ಮ ಹೆಸರು ನೋಂದಾಯಿಸಿದ್ದಾರೆ.SHARE THIS

Author:

0 التعليقات: